ಡೆಹ್ರಾಡೂನ್: ಸ್ವಾತಂತ್ರ್ಯ ದಿನದಂದು ಧ್ವಜಾರೋಹಣ ಸಮಾರಂಭಕ್ಕೆ ಹಾಜರಾಗದ ಕಾರಣಕ್ಕಾಗಿ ಉತ್ತರಖಂಡದ 54 ಐಎಎಸ್ ಅಧಿಕಾರಿಗಳಿಗೆ ಶೋಕಾಸ್ ನೋಟೀಸ್ ನೀಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಶೋಕಾಸ್ ನೋಟೀಸ್ ಪಡೆದವರಲ್ಲಿ ಪ್ರಧಾನ ಮತ್ತು ಹೆಚ್ಚುವರಿ ಕಾರ್ಯದರ್ಶಿಗಳ ಶ್ರೇಣಿಯನ್ನು ಹೊಂದಿರುವವರೂ ಸೇರಿದ್ದಾರೆ.
ಉತ್ತರಾಖಂಡ್ ರಚನೆಯ ಬಳಿಕ ಇದೇ ಪ್ರಥಮ ಬಾರಿಗೆ ಅಧಿಕಾರಿಗಳ ವಿರುದ್ಧ ಇಂತಹ ತೀವ್ರ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿದೆ.
ಮುಖ್ಯ ಕಾರ್ಯದರ್ಶಿ ಎಸ್. ರಾಮಸ್ವಾಮಿ ನೀಡಿದ ನೋಟೀಸಿನಲ್ಲಿ ನಿನ್ನೆ ಸ್ವಾತಂತ್ರ್ಯ ದಿನದಂದು ನಡೆದ ಧ್ವಜಾರೋಹಣ ಕಾರ್ಯಕ್ರಾಮಕ್ಕೆ ಏಕೆ ಹಾಜರಾಗಿಲ್ಲ ಎಂಬುದನ್ನು ವಿವರಿಸಲು ಅಧಿಕಾರಿಗಳನ್ನು ಕೇಳಲಾಗಿದೆ..
ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ಪರೇಡ್ ಮೈದಾನದಲ್ಲಿ ನಡೆಸಿದ ಮುಖ್ಯ ಕಾರ್ಯಕ್ರಮದಿಂದ ದೂರ ಉಳಿದಿದ್ದಕ್ಕಾಗಿ ಈ ಅಧಿಕಾರಿಗಳನ್ನು ಪ್ರಶ್ನಿಸಿ ನೋಟೀಸ್ ಹೊರಡಿಸಲಾಗಿದೆ.
ಮುಖ್ಯಮಂತ್ರಿ ಧ್ವಜಾರೋಹಣ ಕಾರ್ಯಕ್ರಮಕ್ಕೆ ಹಾಜರಾಗದಿರಲು ತೃಪ್ತಿಕರ ಕಾರಣಗಳಿಲ್ಲದೆ ತಪ್ಪಿಹೋದವರ ವಿರುದ್ಧ ದೂರು ನೀಡಲಾಗಿದ್ದು ಇದೀಗ ಅಧಿಕಾರಿಗಳಿಂದ ವಿವರಣೆಯನ್ನು ಪಡೆಯಲು ಮುಖ್ಯ ಕಾರ್ಯದರ್ಶಿಗೆ ಕೋರಿದ್ದಾರೆ.
ಉಳಿದ ಜಿಲ್ಲೆಯ ನ್ಯಾಯಾಧೀಶರು ತಮ್ಮ ಪ್ರದೇಶದ ಧ್ವಜಾರೋಹಣ ಕಾರ್ಯಕ್ರಮಗಳಿಗೆ ಹಾಜರಾಗದ ಅಧಿಕಾರಿಗಳಿಗೆ ಇದೇ ರೀತಿಯ ಸೂಚನೆಗಳನ್ನು ನೀಡಬೇಕೆಂದು ಈ ಸಮಯದಲ್ಲಿ ಕೇಳಲಾಯಿತು.
ನಿಗದಿತ ಅವಧಿಉಯೊಳಗೆ ಸೂಕ್ತ ುತ್ತರ ನೀಡಲು ವಿಫಲರಾಗುವ ಅಧಿಕಾರಿಗಳ ವಿರುದ್ದ ಅವರ ಗೌಪ್ಯ ವರದಿಯಲ್ಲಿ ಬ್ಲ್ಯಖ್ ªÀiÁPïð ªÀiÁqÀ¯ÁUÀĪÀÅzÉAzÀÄ C¢üPÁjUÀ¼ÀÄ w½¹zÁÝgÉ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics