ನವದೆಹಲಿ: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ದೆಹಲಿಯ ಪಂಚತಾರಾ ಹೊಟೇಲ್ ವೊಂದರ ಭದ್ರತಾ ವ್ಯವಸ್ಥಾಪಕನನ್ನು ಪೊಲೀಸರು ಬಂಧಿಸಿದ್ದಾರೆ.
ದೆಹಲಿಯ ಏರೋಸಿಟಿ ಪಂಚತಾರಾ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ 33 ವರ್ಷದ ಮಹಿಳಾ ಸಿಬ್ಬಂದಿಯನ್ನು ಹೋಟೆಲ್ ನ ಭದ್ರತಾ ವ್ಯವಸ್ಥಾಪಕ ಮಹಿಳೆಯನ್ನು ದೈಹಿಕ ಸಂಪರ್ಕಕ್ಕೆ ಕರೆದಿದ್ದಾನೆ. ಇದಕ್ಕೆ ನಿರಾಕರಿಸಿದಕ್ಕೆ ಮಹಿಳೆಯ ಸೀರೆ ಎಳೆದು ವಿವಸ್ತ್ರಗೊಳಿಸಲು ಮುಂದಾಗಿದ್ದ ಈ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಈ ಕುರಿತು ಮಹಿಳೆ ಮೊದಲಿಗೆ ಪೊಲೀಸರಿಗೆ ದೂರು ನೀಡಿದ್ದರು ಯಾವುದೇ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದರು. ಪ್ರಕರಣ ಕುರಿತಂತೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸಿದ್ದಾರೆ.
ಮಹಿಳೆ ತನ್ನ ದೂರಿನಲ್ಲಿ ನನ್ನ ಬಾಸ್ ನನ್ನನ್ನು ರೂಂವೊಂದಕ್ಕೆ ಕರೆಸಿಕೊಂಡು ನನ್ನು ಸೀರೆಯನ್ನು ಎಳೆಯಲು ಮುಂದಾದರು ಇದನ್ನು ನಾನು ವಿರೋಧಿಸಿದೆ. ಇದೇ ವೇಳೆ ಮತ್ತೋರ್ವ ಸಿಬ್ಬಂದಿ ಸಹ ಒಳಗೆ ಇದ್ದರು ಇದನ್ನು ತಡೆಯಲು ಮುಂದಾಗಿಲ್ಲ. ಇದರಿಂದ ತಪ್ಪಿಸಿಕೊಂಡು ನಾನು ಹೊರಗೆ ಬಂದರು ಆತ ನನ್ನು ಹಿಂಬಾಲಿಸಿಕೊಂಡು ಬಂದು ಕಾರಿಗೆ ಎಳೆಯಲು ಮುಂದಾದರು ಆದರೆ ನಾನು ಪ್ರಯಾಸಪಟ್ಟು ನಾನು ಮೆಟ್ರೋ ನಿಲ್ದಾಣದ ಕಡೆ ಹೊರಟು ಹೋದೆ ಎಂದು ಹೇಳಿದ್ದಾರೆ.
ಈ ಘಟನೆ ಕಳೆದ ಎರಡು ವಾರಗಳ ಹಿಂದೆ ನಡೆದಿದ್ದು ಸಿಸಿಟಿವಿಯಲ್ಲಿ ದೃಶ್ಯಗಳು ಸೆರೆಯಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics