ನವದೆಹಲಿ: ಇಂಜಿನ್ ಸಮಸ್ಯೆಯಿಂದ ಭಾರತದ ಅತೀ ದೊಡ್ಡ ವಿಮಾನ ಸಂಸ್ಥೆ ಇಂಡಿಗೋ ತನ್ನ 13 ವಿಮಾನವನ್ನು ಮತ್ತು 84 ವಿಮಾನಗಳ ಹಾರಾಟವನ್ನು ನಿಲ್ಲಿಸಿದೆ ಎಂದು ಭಾರತೀಯ ಟಿವಿ ಮಾಧ್ಯಮಗಳು ವರದಿ ಮಾಡಿವೆ.
ಯುನೆಟೆಡ್ ಟೆಕ್ನಾಲಜಿಯ ಪ್ರಾಟ್ ಮತ್ತು ವಿಟ್ನಿ ಅಭಿವೃದ್ಧಿ ಪಡಿಸಿರುವ ಎ320 ಎರ್ ಬಸ್ ನಲ್ಲಿ ಈ ದೋಷಗಳು ಕಂಡುಬಂದಿರುವುದರಿಂದ ಇಂಡಿಯೋ ಸಂಸ್ಥೆ ಬಲವಂತವಾಗಿ 13 ವಿಮಾನಗಳನ್ನು ನಿಲ್ಲಿಸಿದೆ ಎಂದು ವರದಿಯಾಗಿದೆ.
ಹೆಚ್ಚಿನ ವಿಮಾನಗಳಲ್ಲಿನ ಇಂಜಿನ್ ಗಳನ್ನು ಬದಲಾಯಿಸಬೇಕಿದ್ದು ಹೆಚ್ಚುವರಿ ಇಂಜಿನ್ ಗಳು ಇಲ್ಲದೆ ಇರುವುದರಿಂದ ಸದ್ಯ ವಿಮಾನಗಳ ಹಾರಾಟವನ್ನು ನಿಲ್ಲಿಸಬೇಕಾಗಿದೆ ಎಂದು ಸಂಸ್ಧೆಯ ಅಧ್ಯಕ್ಷ ಆದಿತ್ಯ ಘೋಷ್ ತಿಳಿಸಿದ್ದಾರೆ.
ಇಂಡಿಗೋ ವಿಮಾನ ಸಂಸ್ಥೆಯನ್ನು ಬಿಲೇನಿಯರ್ ರಾಹುಲ್ ಭಾಟಿಯಾ ಮತ್ತು ರಾಕೇಶ್ ಗಂಗ್ವಾಲ್ ಅವರ ಒಡೆತನದಲ್ಲಿದೆ.