ಸಾಂದರ್ಭಿಕ ಚಿತ್ರ 
ದೇಶ

ಮುಂಬೈ: ಸೊಸೆಯನ್ನು ರಕ್ಷಿಸಲು ಪುತ್ರನನ್ನು ಕೊಂದ ತಾಯಿ

ಮಾದಕ ದ್ರವ್ಯ ವ್ಯಸನಿಯಾಗಿದ್ದ ಮಗನ ಕಿರುಕುಳದಿಂದ ಸೊಸೆಯನ್ನು ರಕ್ಷಿಸುವ ಸಲುವಾಗಿ ಸ್ವತಃ ತಾಯಿಯೇ ತನ್ನ ಮಗನನ್ನು ಹತ್ಯೆ ಮಾಡಿರುವ ಘಟನೆಯ ಮುಂಬೈನಲ್ಲಿ ಮಂಗಳವಾರ ನಡೆದಿದ್ದು...

ಮುಂಬೈ: ಮಾದಕ ದ್ರವ್ಯ ವ್ಯಸನಿಯಾಗಿದ್ದ ಮಗನ ಕಿರುಕುಳದಿಂದ ಸೊಸೆಯನ್ನು ರಕ್ಷಿಸುವ ಸಲುವಾಗಿ ಸ್ವತಃ ತಾಯಿಯೇ ತನ್ನ ಮಗನನ್ನು ಹತ್ಯೆ ಮಾಡಿರುವ ಘಟನೆಯ ಮುಂಬೈನಲ್ಲಿ ಮಂಗಳವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 
ಅನ್ವಾರಿ ಇದ್ರಿಸಿ ಪುತ್ರನನ್ನು ಹತ್ಯೆ ಮಾಡಿದ ತಾಯಿಯಾಗಿದ್ದಾರೆ. ನದೀಮ್ ಹತ್ಯೆ ಎಂದು ಗುರ್ತಿಸಲಾಗಿದೆ. ಎರಡು ವರ್ಷಗಳ ಹಿಂದೆಷ್ಟೇ ಇದ್ರಿಸಿ ಪುತ್ರ ನದೀಮ್ ಅಲಹಾಬಾದ್ ಮೂಲದ ಯುವತಿಯೊಬ್ಬಳೊಂದಿಗೆ ಮದುವೆ ಮಾಡಿದ್ದರು. ಮದುವೆಯಾಗುವ ಸಂದರ್ಭದಲ್ಲಿ ಪುತ್ರ ಮಾದಕ ದ್ರವ್ಯ ವ್ಯಸನಿ ಎಂಬ ವಿಚಾರವನ್ನು ಯುವತಿಗೆ ಇದ್ರಿಸಿ ತಿಳಿಸಿರಲಿಲ್ಲ. 
ಇದಾದ ಬಳಿಕ ನದೀಮ್ ಪ್ರತಿನಿತ್ಯ ಮನೆಗೆ ಬಂದು ಪತ್ನಿಗೆ ಹೊಡೆಯುತ್ತಿದ್ದ. ಈತನ ಹೊಡೆತಗಳಿಗೆ ತಾಳಲಾರದೇ ಯುವತಿ ಮನೆಬಿಟ್ಟು ತವರು ಮನೆಯಲ್ಲಿ ವಾಸ್ತವ್ಯ ಹೂಡಿದ್ದಳು. ಬಳಿಕ ಇದ್ರಿಸಿ ಇನ್ನು ಮುಂದೆ ಪುತ್ರನೇನಾದರೂ ಹೊಡೆಯಲು ಬಂದನೆ ನಾನೇ ರಕ್ಷಣೆ ಮಾಡುತ್ತೇನೆಂದು ಹೇಳಿ ಸೊಸೆಯ ಮನವೊಲಿಸಿ ಮನೆಗೆ ಕರೆತಂದಿದ್ದಾರೆನ್ನಲಾಗಿದೆ. 
ಆಗಸ್ಟ್ 15 ರಂದು ಮಾದಕ ದ್ರವ್ಯ ಸೇವಿಸಿ ನದೀಮ್ ಮನೆಗೆ ಬಂದಿದ್ದಾನೆ. ಮಗ ಮನೆಯಲ್ಲಿ ಯಾವುದಾದರೊಂದು ಕ್ಯಾತೆ ತೆಗೆಯುತ್ತಾನೆಂದು ಯೋಚಿಸಿದ್ದ ಇದ್ರಿಸಿ, ಎಲ್ಲರೂ ಬೇಗ ನಿದ್ರೆ ಮಾಡುವಂತೆ ತಿಳಿಸಿದ್ದಾಳೆ. ಅಲ್ಲದೆ, ಸೊಸೆಯನ್ನು ನೆರೆಮನೆಯಲ್ಲಿ ಇರಿಸಿದ್ದಾಳೆ. ಇದನ್ನು ತಿಳಿದ ನದೀಮ್ ಹೆತ್ತ ತಾಯಿಯ ಮೇಲೆಯೇ ಕೋಪಗೊಂಡು ಹೊಡೆದಿದ್ದಾನೆ. ಇದರಿಂತ ಬೇಸತ್ತು ಹೋದ ಇದ್ರಿಸಿ ನದೀಮ್ ಏಣಿಯಿಂದ ಮಗನನ್ನು ತಳ್ಳಿದ್ದಾಳೆ. ನಂತರ ಬಟ್ಟೆಯೊಂದನ್ನು ತೆಗೆದುಕೊಂಡು ಪುತ್ರನ ಕುತ್ತಿಗೆ ಬಿಗಿದಿದ್ದಾಳೆ. 
ಬಳಿಕ ಪುತ್ರ ಸಾವನ್ನಪ್ಪಿರುವುದನ್ನು ನೋಡಿ ಇದ್ರಿಸಿ ಅಳಲು ಆರಂಭಿಸಿದ್ದಾಳೆ. ಬಳಿಕ ನದೀಮ್ ಪತ್ನಿ ಮನೆಗೆ ಬಂದಾಗ ಮೃತದೇಹದ ಬಳಿ ಅತ್ತೆ ಅಳುತ್ತಿರುವುದನ್ನು ನೋಡಿ ಆಘಾತಗೊಂಡಿದ್ದಾಳೆ. 
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದ್ರಿಸಿಯನ್ನು ಬಂಧನಕ್ಕೊಳಪಡಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ವಿಚಾರಣೆ ನಡೆಸಿರುವ ನ್ಯಾಯಾಲಯ ಇದ್ರಿಸಿಯನ್ನು ಆ.31ರವರೆಗೂ ಪೊಲೀಸರ ವಶಕ್ಕೆ ನೀಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂಡಿಯಾ' ಮೈತ್ರಿಕೂಟದ ಒಗ್ಗಟ್ಟು ಮುರಿಯುತ್ತಿದೆಯೇ? ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂಗೆ ಅರ್ಜಿ, 4 ಪ್ರಮುಖ ಪಕ್ಷಗಳು "ದೂರ ದೂರ"

'ನೀನು ಭಯೋತ್ಪಾದಕ ಇಲ್ಲಿಂದ ಹೋಗು': ಅಮೆರಿಕದಲ್ಲಿ Nobel ಯೂನಸ್ ವಿರುದ್ಧ ಬಾಂಗ್ಲಾ ವಲಸಿಗರಿಂದ ಘೋಷಣೆ, Video

ಮುಖ್ಯ ಚುನಾವಣಾ ಆಯುಕ್ತರಿಗೆ ಪದ್ಮ ಪ್ರಶಸ್ತಿಗಳೇ ಲಂಚ: ಕೇಂದ್ರ ಸಚಿವ ಪಿಯೂಷ್ ಗೋಯಲ್ ಸ್ಫೋಟಕ ಹೇಳಿಕೆ

ಎಲ್ಲಾ ಪ್ರತಿಭಟನೆಗಳೂ ಒಂದೇ: 'ಚಾಯ್ ಪೆ ಚರ್ಚೆ' ಗೂ ಮುನ್ನ ರಾಹುಲ್ ಹೇಳಿಕೆ!

KPSC ನೇಮಕಾತಿ ಹಗರಣ: DGP ಅಲೋಕ್ ಕುಮಾರ್ ಸೇರಿ SIT ತಂಡದಿಂದ ಇಬ್ಬರು ಔಟ್; ಸುಪ್ರೀಂಕೋರ್ಟ್ ಮಹತ್ವದ ಸೂಚನೆ!