ನವದೆಹಲಿ: ಕಾಶ್ಮೀರದ ಭಯೋತ್ಪಾದಕರಿಗೆ ಹಣಕಾಸಿನ ನೆರವು ನೀಡಿರುವ ಆರೋಪ ಎದುರಿಸುತ್ತಿರುವ ಕಾಶ್ಮೀರದ ಉದ್ಯಮಿ ಝಹೂರ್ ವಾಟಾಳಿಯನ್ನು 10 ದಿನಗಳ ಎನ್ಐಎ ವಶಕ್ಕೆ ಒಪ್ಪಿಸಲಾಗಿದೆ.
ಜಿಲ್ಲಾ ನ್ಯಾಯಾಧೀಶರಾದ ಪೂನಂ ಎ ಬಂಬಾ ಎನ್ಐಎ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ್ದು, ತನಿಖೆಯ ಭಾಗವಾಗಿ ಆರೋಪಿಯನ್ನು ಹಲವು ಪ್ರದೇಶಗಳಿಗೆ ಕರೆದೊಯ್ಯಬೇಕಿದೆ ಎಂಬ ಎನ್ಐಎ ವಾದವನ್ನು ಪುರಸ್ಕರಿಸಿ ಝಹೂರ್ ವಾಟಾಳಿಯನ್ನು 10 ದಿನಗಳ ಎನ್ಐಎ ವಶಕ್ಕೆ ನೀಡಿ ಆದೇಶಿಸಿದ್ದಾರೆ.
ಎನ್ಐಎ ಝಹೂರ್ ವಾಟಾಳಿಯನ್ನು 2 ವಾರಗಳ ವಶಕ್ಕೆ ಒಪ್ಪಿಸಬೇಕೆಂದು ಕೋರ್ಟ್ ಗೆ ಮನವಿ ಮಾಡಿತ್ತದರೂ ಕೋರ್ಟ್ ಎನ್ಐಎ ಮನವಿಯನ್ನು ಪರಿಗಣಿಸದೇ 10 ದಿನಗಳ ವಶಕ್ಕೆ ಒಪ್ಪಿಸಿದೆ. ಭಯೋತ್ಪಾದಕರಿಗೆ ಸಂದಾಯವಾಗುತ್ತಿರುವ ಹಣಕಾಸಿನ ನೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಶ್ಮೀರಿ ಉದ್ಯಮಿ ವಾಟಾಳಿ ಅವರನ್ನು ಬಂಧಿಸಲಾಗಿತ್ತು.