ದೇಶ

ಉತ್ತರ ಪ್ರದೇಶ: ಇಬ್ಬರು ಬಿಜೆಪಿ ಶಾಸಕರ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

Lingaraj Badiger
ಮುಜಾಫರ್ ನಗರ: ರೈಲು ಸೇವೆಗೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದ ಉತ್ತರ ಪ್ರದೇಶದ ಇಬ್ಬರು ಬಿಜೆಪಿ ಶಾಸಕರಿಗೆ ಇಲ್ಲಿನ ಸ್ಥಳೀಯ ಕೋರ್ಟ್ ಶನಿವಾರ ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಿದೆ.
ಪದೇಪದೆ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿರುವ ಮುಜಾಫರ್ ನಗರ ಕ್ಷೇತ್ರದ ಶಾಸಕ ಕಪಿಲ್ ಅಗರವಾಲ್ ಹಾಗೂ ಬುಧಾನ ಕ್ಷೇತ್ರದ ಶಾಸಕ ಉಮೇಶ್ ಮಲಿಕ್ ಅವರ ವಿರುದ್ಧ ಚೀಫ್ ಜ್ಯುಡಿಸಿಯಲ್ ಮ್ಯಾಜಿಸ್ಟ್ರೇಟ್ ಗೋಪಾಲ್ ತಿವಾರಿ ಅವರು ಇಂದು ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಇಬ್ಬರು ಆರೋಪಿ ಶಾಸಕರನ್ನು ಬಂಧಿಸಿ ಸೆಪ್ಟೆಂಬರ್ 30ರಂದು ಕೋರ್ಟ್ ಗೆ ಹಾಜರುಪಡಿಸುವಂತೆ ಪೊಲೀಸರಿಗೆ ತಿವಾರಿ ಅವರು ಸೂಚಿಸಿದ್ದಾರೆ.
ಏಪ್ರಿಲ್ 3, 2012ರಂದು ರೈಲು ಸೇವೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ರೈಲ್ವೆ ಪೊಲೀಸರು ಇಬ್ಬರು ಶಾಸಕರು ಸೇರಿದಂತೆ ಹಲವು ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
SCROLL FOR NEXT