ದೇಶ

ಭಾರತದ ಗಡಿಯಲ್ಲಿದ್ದ ಪಾಕ್ ದೋಣಿಯನ್ನು ವಶಕ್ಕೆ ಪಡೆದ ಬಿಎಸ್ಎಫ್ ಯೋಧರು

Manjula VN
ಭುಜ್: ಭಾರತ-ಪಾಕಿಸ್ತಾನ ಗಡಿ ಭಾಗ ಕಚ್ ಜಿಲ್ಲೆಯ ಹರಾಮಿ ನಲಾ ಪ್ರದೇಶದಲ್ಲಿರಿಸಲಾಗಿದ್ದ ಪಾಕಿಸ್ತಾನ ಮೂಲದ ದೋಣಿಯನ್ನು ಗಡಿ ಭದ್ರತಾ ಪಡೆ ಶುಕ್ರವಾರ ವಶಕ್ಕೆ ಪಡೆದುಕೊಂಡಿದೆ. 
ಭಾರತದ ಗಡಿಯಿಂದ 400 ಮೀಟರ್ ದೂರದಲ್ಲಿ ದೋಣಿಯನ್ನು ಇರಿಸಲಾಗಿತ್ತು. ಪಾಕಿಸ್ತಾನ ಮೂಲದ ನಾಲ್ವರು ಮೀನುಗಾರರು ದೋಣಿಯಲ್ಲಿದ್ದರು. ಗಡಿಯಲ್ಲಿ ಬಿಎಸ್ಎಫ್ ಪಡೆ ಗಸ್ತು ತಿರುಗುವುದನ್ನು ಕಂಡ ಮೀನುಗಾರರು ದೋಣಿಯನ್ನು ಬಿಟ್ಟು ಓಡಿಹೋಗಿದ್ದಾರೆಂದು ತಿಳಿದುಬಂದಿದೆ. 
ಪ್ರಸ್ತುತ ದೋಣಿಯನ್ನು ಬಿಎಸ್ಎಫ್ ಪಡೆ ಪರಿಶೀಲನೆ ನಡೆಸುತ್ತಿದ್ದು, ದೋಣಿಯಲ್ಲಿ 1 ಬಲೆ ಹಾಗೂ 4 ಐಸ್ ಬಾಕ್ಸ್ ಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಈ ಹಿಂದೆ ಕೂಡ ಬಿಎಸ್ಎಫ್ ಪಡೆ ಗಡಿಯಲ್ಲಿ ಪಾಕಿಸ್ತಾನದ ಹಲವು ದೋಣಿಗಳು ಹಾಗೂ ಮೀನುಗಾರರನ್ನು ವಶಕ್ಕೆ ಪಡೆದುಕೊಂಡಿದೆ. ಭಾರತ-ಪಾಕಿಸ್ತಾನದ ಮದ್ಯದಲ್ಲಿರುವ ವಿವಾದಿತ ಸರ್ ಕ್ರೀಕ್ ಪ್ರದೇಶದಲ್ಲಿ ಪಾಕಿಸ್ತಾನ ಮೀನುಗಾರರು ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದಾರೆ. 
SCROLL FOR NEXT