ಜೈಪುರ: ಮನೆಯಲ್ಲಿ ಶೌಚಾಲಯ ನಿರ್ಮಿಸದ ಗಂಡನಿಂದ ವಿಚ್ಛೇದನ ಪಡೆಯಲು ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ರಾಜಸ್ಥಾನ ಹೈಕೋರ್ಟ್ ಮಾನ್ಯ ಮಾಡಿದ್ದು, ಆಕೆಗೆ ವಿಚ್ಛೇದನ ಮಂಜೂರು ಮಾಡಿದೆ.
ಕೌಟುಂಬಿಕ ನ್ಯಾಯಾಲಯ ಮಹಿಳೆಗೆ ವಿಚ್ಛೇದನ ಮಂಜೂರು ಮಾಡಿದ್ದು, ಮನೆಯಲ್ಲಿ ಶೌಚಾಲಯ ನಿರ್ಮಾಣ ಮಾಡದೇ ಇರುವುದು ಪತ್ನಿ ವಿರುದ್ಧದ ಕ್ರೌರ್ಯ ಎಂದು ಕೋರ್ಟ್ ಅಭಿಪ್ರಾಯಪಟ್ಟಿದ್ದು, ವಿಚ್ಛೇದನಕ್ಕೆ ಅರ್ಹ ಎಂದು ಹೇಳಿದೆ. 2011 ರಲ್ಲಿ ವಿವಾಹವಾದ ರಾಜಸ್ಥಾನದ ಮಹಿಳೆ ಮನೆಯಲ್ಲಿ ಶೌಚಾಲಯ ನಿರ್ಮಿಸಲು ಪದೇ ಪದೇ ಮನವಿ ಮಾಡಿದ್ದರಾದರೂ ಶೌಚಾಲಯ ನಿರ್ಮಾಣ ಮಾಡಲು ಪತಿ ನಿರಾಕರಿಸಿದ್ದರಿಂದ 2015 ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.
ಮನೆಯಲ್ಲಿ ಶೌಚಾಲಯ ಇಲ್ಲದೇ ಇರುವುದರಿಂದ ತನ್ನ ಘನತೆಗೆ ಧಕ್ಕೆ ಉಂಟಾಗುತ್ತಿದೆ ಎಂದು ಮಹಿಳೆ ವಿಚ್ಛೇದನಕ್ಕೆ ಕಾರಣ ನೀಡಿದ್ದರು. ಗ್ರಾಮದ ಬಹುತೇಕ ಮಹಿಳೇಯರು ಬಯಲು ಶೌಚವನ್ನೇ ಆಧರಿಸಿದ್ದರಿಂದ ಪತ್ನಿಯ ಬೇಡಿಕೆಯನ್ನು ಪತಿ ವಿಚಿತ್ರವೆಂಬಂತೆ ಕಂಡಿದ್ದಾನೆ. ಮಹಿಳೆಯ ಕುಟುಂಬದವರು ಮನೆಯಲ್ಲಿ ಶೌಚಾಲಯ ನಿರ್ಮಾಣ ಮಾಡದೇ ಇದ್ದಿದ್ದಕ್ಕೆ ಯಾವುದೇ ಆಕ್ಷೇಪ ವ್ಯಕ್ತಪಡಿಸಲಿಲ್ಲ ಎಂದೂ ಪತಿ ಸಮರ್ಥನೆ ನೀಡಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics