ಸಂಗ್ರಹ ಚಿತ್ರ 
ದೇಶ

ಆಮ್ಲಜನಕ ಕೊರತೆ: ಛತ್ತೀಸ್ಗಢ ಆಸ್ಪತ್ರೆಯಲ್ಲಿ 3 ಮಕ್ಕಳ ಸಾವು

ಆಮ್ಲಜನಕ ಕೊರತೆ ಎದುರಾಗಿ ಉತ್ತರಪ್ರದೇಶದ ಗೋರಖ್'ಪುರ ಆಸ್ಪತ್ರೆಯಲ್ಲಿ ನಡೆದ ಮಕ್ಕಳ ಮಾರಣಹೋಮ ದುರಂತ ಪ್ರಕರಣ ಜೀವಂತವಾಗಿರುವ ಬೆನ್ನಲ್ಲೇ ಛತ್ತೀಸ್ಗಢದಲ್ಲೂ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ...

ನವದೆಹಲಿ: ಆಮ್ಲಜನಕ ಕೊರತೆ ಎದುರಾಗಿ ಉತ್ತರಪ್ರದೇಶದ ಗೋರಖ್'ಪುರ ಆಸ್ಪತ್ರೆಯಲ್ಲಿ ನಡೆದ ಮಕ್ಕಳ ಮಾರಣಹೋಮ ದುರಂತ ಪ್ರಕರಣ ಜೀವಂತವಾಗಿರುವ ಬೆನ್ನಲ್ಲೇ ಛತ್ತೀಸ್ಗಢದಲ್ಲೂ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆಂದು ಸೋಮವಾರ ತಿಳಿದುಬಂದಿದೆ. 
ಛತ್ತೀಸ್ಘಢದ ಅತ್ಯಂತ ದೊಡ್ಡ ಆಸ್ಪತ್ರೆ ಎಂದು ಹೇಳಲಾಗುವ ರಾಯ್ಬುರ ಸರ್ಕಾರಿ ಬಿ.ಆರ್.ಆಂಬೇಡ್ಕರ್ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದಾಗಿ ಇಂದು ಬೆಳಿಗ್ಗೆ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ. 
ಮಕ್ಕಳ ಸಾವಿಗೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಉಂಟಾದ ಆಮ್ಲಜನಕ ಪೂರೈಕೆಯ ವ್ಯತ್ಯಯವೇ ಕಾರಣ ಹೇಳಲಾಗುತ್ತಿದೆ. ಆದರೆ, ಆಸ್ಪತ್ರೆಯ ಮಾತ್ರ ಈ ಆರೋಪಗಳನ್ನು ತಿರಸ್ಕರಿಸಿದ್ದು, ಆಮ್ಮಜನಕ ಕೊರತೆ ಎದುರಾಗಿರಲಿಲ್ಲ. ಮಕ್ಕಳ ಸಾವಿಗೆ ಅನಾರೋಗ್ಯವೇ ಕಾರಣ ಎಂದು ಹೇಳುತ್ತಿದೆ. 
ಆಸ್ಪತ್ರೆಯ ಆಮ್ಲಜನಕ ಪೂರೈಕೆ ವ್ಯವಸ್ಥೆಯಲ್ಲಿ ಸಮಸ್ಯೆ ಎದುರಾಗುತ್ತಿದ್ದಂತೆಯೇ ಕರ್ತವ್ಯದಲ್ಲಿದ್ದ ವೈದ್ಯರು ಕೂಡಲೇ ಪರಿಹಾರ ಕಾರ್ಯಗಳನ್ನು ಕೈಗೊಂಡಿದ್ದು ಎಂದು ಆರೋಗ್ಯ ಸೇವೆಗಳ ಕಾರ್ಯದರ್ಶಿ ಆರ್. ಪ್ರಸನ್ನ ಅವರು ಹೇಳಿದ್ದಾರೆ. 
ಘಟನೆ ಬಳಿಕ ಆಸ್ಪತ್ರೆಯ ಅಧಿಕಾರಿಗಳು ಆಮ್ಲಜನಕ ಪೂರೈಕೆಯ ಉಸ್ತುವಾರಿ ಹೊತ್ತಿದ್ದ ಆಪರೇಟರ್ ಒಬ್ಬನನ್ನು ಕೆಲಸದಿಂದ ತೆಗೆದುಹಾಕಿದೆ ಎಂದು ತಿಳಿದುಬಂದಿದೆ. 
ಘಟನೆಗೆ ಮುಖ್ಯಮಂತ್ರಿ ರಮಣ್ ಸಿಂಗ್ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದು, ಘಟನೆ ಕುರಿತಂತೆ ತನಿಖೆಗೆ ಆದೇಶಿಸಿದ್ದಾರೆ. ಮಕ್ಕಳ ಸಾವಿದೆ ಬೇಜವಾಬ್ದಾರಿತನವೇ ಕಾರಣ ಎಂಬುದೇ ಆಗಿದ್ದರೆ, ಇದನ್ನು ನಿಜಕ್ಕೂ ಗಂಭೀರವಾಗಿ ಪರಿಗಣಿಸಬೇಕು. ಸ್ಥಳಕ್ಕೆ ಧಾವಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತಪ್ಪಿತಸ್ಥರನ್ನು ಸುಮ್ಮನೆ ಬಿಡುವುದಿಲ್ಲ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!