ದೇಶ

ಪ್ರಯಾಣಿಕರ ಸುರಕ್ಷತೆಗೆ ಪ್ರಮುಖ ಆದ್ಯತೆ: ರೈಲ್ವೆ ಮಂಡಳಿ ನೂತನ ಅಧ್ಯಕ್ಷ ಲೋಹನಿ

Lingaraj Badiger
ನವದೆಹಲಿ: ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸುರಕ್ಷತೆಗೆ ಪ್ರಮುಖ ಆದ್ಯತೆ ನೀಡಲಾಗುವುದು ಎಂದು ರೈಲ್ವೆ ಮಂಡಳಿಯ ನೂತನ ಅಧ್ಯಕ್ಷ ಅಶ್ವನಿ ಲೋಹನಿ ಅವರು ಗುರುವಾರ ಹೇಳಿದ್ದಾರೆ.
ಇಂದು ರೈಲ್ವೆ ಮಂಡಳಿಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಲೋಹನಿ ಅವರು, ಪ್ರಯಾಣಿಕರ ಸುರಕ್ಷತಗೆ ಮೊದಲ ಆದ್ಯತೆ, ನತರ ಸ್ವಚ್ಛತೆ, ರೈಲ್ವೆ ನಿಲ್ದಾಣಗಳ ಸುಧಾರಣೆ, ಭ್ರಷ್ಟಾಚಾರ ಮತ್ತು ವಿಐಪಿ ಸಂಸ್ಕೃತಿಗೆ ಕಡಿವಾಣ ಹಾಕುವುದರ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ರೈಲ್ವೆ ಬಗ್ಗೆ ಜನರಲ್ಲಿ ಸಾಕಷ್ಟು ನಿರೀಕ್ಷೆಗಳಿವೆ. ಅವುಗಳನ್ನು ಈಡೇರಿಸುವುದಕ್ಕಾಗಿ ಶ್ರಮವಹಿಸಿ ಕೆಲಸ ಮಾಡುವುದಾಗಿ ಲೋಹನಿ ಹೇಳಿದ್ದಾರೆ.
ಇತ್ತೀಚಿಗೆ ಒಂದೇ ವಾರದಲ್ಲಿ ಎರಡು ರೈಲುಗಳು ಹಳಿತಪ್ಪಿದ ಪರಿಣಾಮ ರೈಲ್ವೆ ಮಂಡಳಿ ಅಧ್ಯಕ್ಷರಾಗಿದ್ದ ಎಕೆ ಮಿತ್ತಲ್ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಅವರ ಸ್ಥಾನಕ್ಕೆ ನಿನ್ನೆಯಷ್ಟೇ ರೈಲ್ವೆ ಸಚಿವಾಲಯ ಅಶ್ವನಿ ಲೋಹನಿ ಅವರನ್ನು ನೇಮಕ ಮಾಡಿತ್ತು.
SCROLL FOR NEXT