ದೇಶ

ಪ್ರವಾಹ ಪೀಡಿತ ಬಿಹಾರ ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ: ಸಿಎಂ ನಿತೀಶ್ ಜೊತೆಗೆ ಪ್ರವಾಹ ಪರಿಸ್ಥಿತಿ ಸಮೀಕ್ಷೆ

Manjula VN
ಪೂರ್ನಿಯಾ (ಬಿಹಾರ): ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಿಹಾರ ರಾಜ್ಯದ ಪ್ರವಾಹ ಪೀಡಿದ ಪ್ರದೇಶಗಳ ವೈಮಾನಿಕ ಸಮೀಕ್ಷೆ ಹಾಗೂ ಪರಿಹಾರ ಕಾರ್ಯಗಳ ಪರಾಮರ್ಶೆಗಾಗಿ ಶನಿವಾರ ಬಿಹಾರಕ್ಕೆ ಭೇಟಿ ನೀಡಿದ್ದಾರೆ. 
ಕಳೆದ ಹಲವು ದಿನಗಳಿಂದ ಬಿಹಾರದಲ್ಲಿ ಸುರಿಯುತ್ತಿರುವ ಭಾರೀ ಮಳೆ ಹಾಗೂ ಮಳೆ ಸಂಬಂಧಿತ ದುರಂಗಳಲ್ಲಿ ಈ ವರೆಗೂ 415 ಜನರು ಮೃತಪಟ್ಟಿದ್ದಾರೆ. ಅಪಾರ ಆಸ್ತಿಪಾಸ್ತಿ ನಷ್ಟ ಸಂಭವಿಸಿದ ಹಿನ್ನಲೆಯಲ್ಲಿ ಇಂದು ಪ್ರಧಾನಿ ಮೋದಿಯವರು ಬಿಹಾರಕ್ಕೆ ಭೇಟಿ ನೀಡಿದ್ದಾರೆ.

ಬಿಹಾರ ರಾಜ್ಯದ ಅರಾರಿಯಾ, ಪೂರ್ನಿಯಾ, ಕಟಿಹಾರ್ ಮತ್ತು ಕಿಷನ್ ಗಂಜ್ ಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. 

ವೈಮಾನಿಕ ಸಮೀಕ್ಷೆ ಬಳಿಕ ಪುರ್ನಿಯಾದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಅಧಿಕಾರಿಗಳ ಜೊತೆಗೆ ಪ್ರಧಾನಿ ಮೋದಿ ಸಭೆ ನಡೆಸಲಿದ್ದಾರೆ. 

ಪ್ರವಾಹದಿಂದಾಗಿ ಬಿಹಾರ ರಾಜ್ಯದ 21 ಜಿಲ್ಲೆಗಳು ಸಂಕಷ್ಟಕ್ಕೆ ಸಿಲುಕಿದ್ದು, ಮುಜಾಫರ್ನಗರ, ಸಮಸ್ತಿಪುರ ಮತ್ತು ದರ್ಬಾಂಗ್ ಜಿಲ್ಲೆಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಲುಪಿದೆ. ಮುಜಾಫರ್ನಗರದ ಪ್ರದೇಶಗಳು, ತಿರ್ಹತ್ ಕಾಲುವೆ ಪ್ರವಾಹದಲ್ಲಿ ಸಿಲುಕಿದೆ. 
SCROLL FOR NEXT