ತ್ರಿವರ್ಣ ಧ್ವಜ ಸುಟ್ಟ ಯುವತಿ 
ದೇಶ

ನಾಗಾ ಸಾರ್ವಭೌಮತೆಗಾಗಿ ಪಾಕಿಸ್ತಾನ ಬೆಂಬಲ ಕೋರಿ ತ್ರಿವರ್ಣ ಧ್ವಜ ಸುಟ್ಟ ಯುವತಿ: ವಿಡಿಯೋ ವೈರಲ್

ನಾಗಾ ಜನರು ಸಾರ್ವಭೌಮತೆ ಪಡೆಯಲು ಪಾಕಿಸ್ತಾನ ಬೆಂಬಲ ಕೋರಿರುವ ಯುವತಿಯೊಬ್ಬಳು ಭಾರತದ ತ್ರಿವರ್ಣ ಧ್ವಜವನ್ನು ಸುಟ್ಟು ಹಾಕಿರುವ ವಿಡಿಯೋ ಫೇಸ್ ಬುಕ್ ...

ಗುವಾಹತಿ: ನಾಗಾ ಜನರು  ಸಾರ್ವಭೌಮತೆ ಪಡೆಯಲು ಪಾಕಿಸ್ತಾನ ಬೆಂಬಲ ಕೋರಿರುವ ಯುವತಿಯೊಬ್ಬಳು ಭಾರತದ ತ್ರಿವರ್ಣ ಧ್ವಜವನ್ನು ಸುಟ್ಟು ಹಾಕಿರುವ ವಿಡಿಯೋ ಫೇಸ್ ಬುಕ್ ನಲ್ಲಿ ಹರಿದಾಡುತ್ತಿದ್ದು ಆಘಾತ ವನ್ನುಂಟು ಮಾಡಿದೆ.
ಕೌಂಟರ್ ನೆರೆಟಿವ್ ಎಂಬ ಫೇಸ್ ಬುಕ್ ವಾಲ್ ನಲ್ಲಿ ಒಂದು ನಿಮಿಷ 32 ಸೆಕೆಂಡ್ ಇರುವ ವಿಡಿಯೋ ಅಪ್ ಲೋಡ್ ಮಾಡಲಾಗಿದೆ. ನ್ಯಾಶನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್  ಸಂಘಟನೆ 1997 ರಿಂದ ಕೇಂದ್ರದೊಂದಿಗೆ ಶಾಂತಿ ಸಮಾಲೋಚನೆಯಲ್ಲಿ ನಿರತವಾಗಿದೆ.
ವಿಡಿಯೋದಲ್ಲಿನ ಆಕೆ ಮುಖ ತೋರಿಸಿದ ನಂತರ, ಪ್ರಧಾನಿ ನರೇಂದ್ರ ಮೋದಿ, ಬಂಡುಕೋರರು,  ಬುಡಕಟ್ಟು ವಿದ್ಯಾರ್ಥಿಗಳು, ಧ್ವಜ ಹಿಡಿದು ನಿಂತ ಪಾಕಿಸ್ತಾನಿ ಮಹಿಳೆ, ಕಾಶ್ಮೀರಿ ಪಂಡಿತರು ಮತ್ತು ಫ್ರೀ ನಾಗಾ ನೇಷನ್ ಮತ್ತು ಕವಚದಿಂದ ಕತ್ತಿ ಹೊರ ತೆಗೆಯುತ್ತಿರುವ ಮೋದಿ ಚಿತ್ರಗಳು ಬಂದು ಹೋಗುತ್ತವೆ. 
ವಿಡಿಯೋದಲ್ಲಿರುವ ಯುವತಿ ನಾಗಾ ಬಡುಕಟ್ಟಿನವಳೇ ಅಥವಾ ಅಲ್ಲವೇ ಎಂಬುದರ ಬಗ್ಗೆ ತನಿಖೆ ನಡೆದಿದ್ದು ಆಕೆ ಮಂಗೋಲಿಯನ್ ಮೂಲದವಳು ಎಂದು ಹೇಳಲಾಗಿದೆ.
ಡಿಯರ್ ಪಾಕಿಸ್ತಾನಿ ನೇಷನ್, ನಿಮಗೆಲ್ಲಾ ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳು, ನಾವು ನಾಗಾ ಜನರು ಆಗಸ್ಟ್ 14 ರಂದು ಸ್ವಾತಂತ್ರ್ಯಕ್ಕಾಗಿ ನಿರೀಕ್ಷಿಸಿದ್ದೆವು. ಏಕೆದರೇ ನೀವು ಬ್ರಿಟಿಷರಿಂದ  ಸ್ವಾತಂತ್ರ್ಯ ಪಡೆದಂತೆಯೇ ನಾವು ನಮ್ಮ ಸ್ವಾತಂತ್ರ್ಯ ಸಾಧನೆ ಮಾಡಬೇಕೆಂದು ಬಯಸಿದ್ದೆವು. ಆದರೆ ಬ್ರಿಟಿಷರ ನಂತರ ನಾವು ಭಾರತೀಯರ ಗುಲಾಮರಾಗಿರುವುದು ನಮ್ಮ ದುರಾದೃಷ್ಟ. ಬ್ರಿಟಿಷರು ಭಾರತ ಬಿಟ್ಟು ತೆರಳಿದ ದಿನದಿಂದ ನಾಗಾಗಳು ಬ್ರಾಹ್ಮಣ ಭಯೋತ್ಪಾದರ ರಾಜ್ಯದಂತ ಕಾಶ್ಮೀರ ಮತ್ತು ಸಿಖ್ ಗಳ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ, ಇವತ್ತು ನಾನು ನಾಗಾಗಳಿಗಾಗಿ ಈ ಧ್ವಜವನ್ನು ಸುಡುತ್ತಾ ನಿಮ್ಮ ಬೆಂಬಲ ಕೋರುತ್ತಿದ್ದೇನೆ ಎಂದು ವಿಡಿಯೋದಲ್ಲಿ ಹೇಳಿದ್ದಾಳೆ.
ಧ್ವಜವನ್ನು ಸುಟ್ಟ ನಂತರ ಯುವತಿಯ ಹೇಳಿಕೆ ಮುಂದುವರಿಸಿರುವ ಆಕೆ, ಇದು ಭಾರತವಲ್ಲ, ನಾವು ಭಾರತೀಯರಲ್ಲ, ನಮಗೆ ನಮ್ಮದೇ ಆದ ಸಂಸ್ಕೃತಿ, ಇತಿಹಾಸ, ಭಾಷೆ, ನಮ್ಮ ದೇಶ ಹಾಗೂ ಸೇನೆ ಹೊಂದಿದ್ದೇವೆ. ಈಗ ನಮಗೆ ನಮ್ಮ ಸ್ವಾತಂತ್ರ್ಯ ಬೇಕು ಎಂದು ಹೇಳಿದ್ದಾಳೆ.
'ನಾಗಾಗಳು ಸ್ವತಂತ್ರ್ಯರಾಗಲು ಎಲ್ಲಾ ಹಕ್ಕುಗಳನ್ನು ಹೊಂದಿದ್ದಾರೆ, ನಮ್ಮ ಭಾರತವನ್ನು ಸೇರಲ ನಿಮಗೆ ಇಷ್ಟವಿಲ್ಲದ ಪಕ್ಷದಲ್ಲಿ ಯಾರೋಬ್ಬರು ನಿಮ್ಮನ್ನು ಒತ್ತಾಯ ಪಡಿಸುವುದಿಲ್ಲ, ನಾಗಾಗಳಿಗಾಗಿ ನಾನು ನನ್ನ ಜೀವನ ತ್ಯಾಗ ಮಾಡುತ್ತೇನೆ, ಯಾವುದೇ ನಾಗಾ ವ್ಯಕ್ತಿಯನ್ನು ಕೊಲ್ಲುವ ಮೊದಲು ನನ್ನನ್ನು ಕೊಲ್ಲಬೇಕೆಂದು ಭಾರತೀಯ ಸೇನೆಗೆ ನಾನು ಕೇಳಿಕೊಳ್ಳುತ್ತೇನೆ. ನಿಮ್ಮ ಮೇಲೆ ದಾಳಿ ಮಾಡುವ ಹಕ್ಕು ಭಾರತಕ್ಕಿಲ್ಲ' ಎಂದು ಮಹಾತ್ಮ ಗಾಂಧಿ ಹೇಳಿರುವ ಮಾತುಗಳ ಬರಹ ವಿಡಿಯೋದಲ್ಲಿ ಬರುತ್ತದೆ.
ಈ ಸಂಬಂಧ ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ ಎಂದು ನಾಗಾ ಪೊಲೀಸರು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT