ನವದೆಹಲಿ: ಹಳೆಯ 1000 ಮತ್ತು 500 ರು. ಮುಖಬೆಲೆಯ ನೋಟು ನಿಷೇಧದ ಬಳಿಕ ಕಾಳಧನಿಕರ ವಶದಲ್ಲಿದ್ದ ನೋಟುಗಳು ಬ್ಯಾಕಿಂಗ್ ವ್ಯವಸ್ಥೆಗೆ ಮರಳಿವೆ ಎಂಬ ಅನುಮಾನ ಶ್ರೀಸಾಮಾನ್ಯರಿಗೆ ಅಚ್ಚರಿಯ ಪ್ರಶ್ನೆಯಾಗಿ ಕಾಡಿತ್ತು.
ಆದರೆ ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ವೆಬ್ ಸೈಟ್ ನಲ್ಲಿ, ಚಲಾವಣೆಯಲ್ಲಿದ್ದ 1000 ರು ಮುಖಬೆಲೆಯ ನೋಟುಗಳ ಪೈಕಿ ಶೇಕಡ 99ರಷ್ಟು ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿವೆ ಎಂದು ಪ್ರಕಟಿಸಿದೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ.
ಕಳೆದ ವರ್ಷ ನವೆಂಬರ್ 8ರಂದು ಒಟ್ಟು 6.86 ಲಕ್ಷ ಕೋಟಿಯಷ್ಟು 1000 ರು. ನೋಟುಗಳು ಚಲಾವಣೆಯಲ್ಲಿದ್ದವು ಎಂದು ಹಣಕಾಸು ಇಲಾಖೆ ಸಹಾಯಕ ಸಚಿವ ಸಂತೋಷ ಗಂಗ್ವಾರ್ ಫೆಬ್ರವರಿ 3ರಂದು ಲೋಕಸಭೆಗೆ ಮಾಹಿತಿ ನೀಡಿದ್ದರು.
ಈ ಪ್ರಮಾಣಕ್ಕೆ ಹೋಲಿಸಿದರೆ 8,925 ಕೋಟಿ ಎಂಬುದು ಕೇವಲ ಶೇ 1.3ರಷ್ಟಾಗುತ್ತದೆ. ಅಂದರೆ ಶೇ 98.7ರಷ್ಟು ನೋಟುಗಳು ಆರ್ಬಿಐಗೆ ಮರಳಿವೆ ಎಂದಾಯಿತು.