ದೇಶ

ಅಮೆರಿಕಾದ ಸಿಇಎ ಗೆ ಆಧಾರ್ ಮಾಹಿತಿ ಸೋರಿಕೆ?

Raghavendra Adiga
ವಿಸ್ಲಿಬ್ಲವರ್ ಸೈಟ್ ವಿಕಿಲೀಕ್ಸ್ ಇತ್ತೀಚೆಗೆ ಅಮೆರಿಕದ ಕೇಂದ್ರೀಯ ಇಂಟೆಲಿಜೆನ್ಸ್ ಏಜೆನ್ಸಿ (ಸಿಐಎ) ಭಾರತೀಯ ನಾಗರಿಕರ ವಿಶಿಷ್ಟ ಗುರುತಿನ ಡೇಟಾವನ್ನು (ಆಧಾರ್) ಮಾಹಿತಿಯನ್ನು ಆಕ್ಸಸ್ ಮಾಡುತ್ತಿದೆ ಎಂದು ತನ್ನ ರಹಸ್ಯ ವರದಿಯಲ್ಲಿ ಬಹಿರಂಗಪಡಿಸಿದೆ.
ಅಮೆರಿಕದ ಕ್ರಾಸ್‌ ಮ್ಯಾಚ್‌ ಟೆಕ್ನಾಲಜೀಸ್‌ ಹೆಸರಿನ ಸೈಬರ್‌ ಗೂಢಚರ ಸಂಸ್ಥೆ ಆಧಾರ್‌ ದತ್ತಾಂಶಗಳನ್ನು ಪಡೆದು ಸಿಐಎಗೆ ನೀಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕ್ರಾಸ್‌ ಮ್ಯಾಚ್‌ ಟೆಕ್ನಾಲಜೀಸ್‌ ಭಾರತದಲ್ಲಿ ತನ್ನ ಪಾಲುದಾರ ಸಂಸ್ಥೆ ಸ್ಮಾರ್ಟ್‌ ಐಡೆಂಟಿಟಿ ಡಿವೈಸ್‌ ಪ್ರೈ.ಲಿ. ಜೊತೆಗೆ ಸೇರಿ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದಿಂದ 12 ಲಕ್ಷ ಮಂದಿ ಆಧಾರ್‌ ನೋಂದಣಿ, ಬಯೋಮೆಟ್ರಿಕ್‌ಗಳನ್ನು ಪಡೆಯಲು ನೆರವಾಗಿದೆ. ಈ ಮೂಲಕ ದತ್ತಾಂಶಗಳನ್ನು ಸಪಡೆದಿದೆ  ಎನ್ನಲಾಗಿದೆ. ಪ್ರಕರಣದ ಕುರಿತಾಗಿ ವಿಕಿಲೀಕ್ಸ್‌ ಟ್ವೀಟ್‌ ಮಾಡಿದ್ದು, ಆಧಾರ್‌ ಮಾಹಿತಿಯನ್ನು ಈಗಾಗಲೇ ಸಿಐಎ ಕದ್ದಿದೆಯೆ? ಎಂದು ಪ್ರಶ್ನೆ ಮಾಡಿದೆ.
ಆದರೆ ಮೂಲಗಳು ಹೇಳುವಂತೆ ಕ್ರಾಸ್‌ ಮ್ಯಾಚ್‌ ಬಯೋಮೆಟ್ರಿಕ್‌ ಸಾಧನಗಳನ್ನು ಪೂರೈಸುವ ಜಾಗತಿಕ ಸಂಸ್ಥೆಯಾಗಿದ್ದು, ಪಡೆದ ದತ್ತಾಂಶಗಳನ್ನು ಗೂಢಲಿಪಿಯನ್ನಾಗಿಸಿ, ಆಧಾರ್‌ ಸರ್ವರ್‌ ಗೆ ಕಳಿಸುತ್ತದೆ. ವಿಕಿಲೀಕ್ಸ್‌ ವರದಿಯಲ್ಲಿ ಯಾವುದೇ ಸತ್ಯಾಂಶಗಳಿಲ್ಲ. ಆಧಾರ್‌ ಅನ್ನು ಸುರಕ್ಷಿತವಾಗಿ ಗೂಢಲಿಪಿಯನ್ನಾಗಿಸಿ ಇಡಲಾಗಿದ್ದು, ಯಾವುದೇ ಏಜೆನ್ಸಿಗಳಿಗೆ ಅದನ್ನು ಪಡೆಯಲು ಸಾಧ್ಯವಿಲ್ಲೀಂದು ತಿಳಿಸಲಾಗಿದೆ.
SCROLL FOR NEXT