ಲಖನೌ: ಬ್ಲೂ ವೇಲ್ ಚಾಲೆಂಜ್ ಗೆ ಮತ್ತೋರ್ವ ವಿದ್ಯಾರ್ಥಿ ಬಲಿಯಾಗಿದ್ದು, 6 ನೇ ತರಗತಿ ವಿದ್ಯಾರ್ಥಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.
ಭಾನುವಾರ (ಆ.28) ರ ರಾತ್ರಿ ಈ ಘಟನೆ ಬೆಳಕಿಗೆ ಬಂದಿದ್ದು, ವಿದ್ಯಾರ್ಥಿ ಪಾರ್ಥ್ ಸಿಂಗ್ ತನ್ನ ರೂಮ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. 6 ನೇ ತರಗತಿಯ ವಿದ್ಯಾರ್ಥಿಯಾಗಿದ್ದ ಪಾರ್ಥ್ ಸಿಂಗ್ ಕೈಯ್ಯಲ್ಲಿ ಆತನ ತಂದೆಯ ಮೊಬೈಲ್ ಇತ್ತು. ಕೆಲವು ದಿನಗಳ ಹಿಂದೆ ಮೊಬೈಲ್ ನಲ್ಲಿ ಬ್ಲೂ ವೇಲ್ ಚಾಲೆಂಜ್ ಗೇಮ್ ಆಡುತ್ತಿದ್ದಾಗ ಆಡದಂತೆ ಪೋಷಕರು ಎಚ್ಚಹ್ರಿನೆ ನೀಡಿದ್ದರು, ಎಚ್ಚರಿಕೆ ನೀಡಿದ್ದರ ಹೊರತಾಗಿಯೂ ಪಾರ್ಥಿ ಸಿಂಗ್ ಪೋಷಕರ ಅನುಪಸ್ಥಿತಿಯಲ್ಲಿ ತಂದೆಯ ಮೊಬೈಲ್ ನಲ್ಲಿ ಬ್ಲೂ ವೇಲ್ ಚಾಲೆಂಜ್ ಗೇಮ್ ಆಡಲು ಪ್ರಾರಂಭಿಸಿದ್ದಾನೆ.
ಭಾನುವಾರದಂದು ತನ್ನ ಸ್ನೇಹಿತನ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿತ್ತು. ಆದರೆ ರೂಮ್ ನಲ್ಲಿ ಬಾಗಿಲು ಹಾಕಿಕೊಂಡಿದ್ದ ಎಂದು ಮೃತ ವಿದ್ಯಾರ್ಥಿಯ ತಂದೆ ವಿಕ್ರಂ ಸಿಂಗ್ ಹೇಳಿದ್ದಾರೆ. ಬ್ಲೂ ವೇಲ್ ಚಾಲೆಂಜ್ ಆಯಾಮದಿಂದಲೇ ಪೊಲೀಸರು ವಿದ್ಯಾರ್ಥಿಯ ಸಾವಿನ ತನಿಖೆ ನಡೆಸುತ್ತಿದ್ದಾರೆ.