ದೇಶ

ಗೋರಖ್'ಪುರ ಆಸ್ಪತ್ರೆ ದುರಂತ: 9 ಜನರ ವಿರುದ್ಧ ಎಫ್ಐಆರ್ ದಾಖಲು

Manjula VN
ಲಖನೌ: ಉತ್ತರಪ್ರದೇಶದ ಗೋರಖ್'ಪುರ ಆಸ್ಪತ್ರೆ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿ ವಿರುದ್ಧ ಅಧಿಕಾರಿಗಳು ಸೋಮವಾರ ಎಫ್ಐಆರ್ ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ. 
ಅಮಾನತುಗೊಂಡಿರುವ ಬಿಆರ್'ಡಿ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ.ರಾಜೀವ್ ಮಿಶ್ರಾ, ಆಸ್ಪತ್ರೆಯ 6 ಮಂದಿ ಸಿಬ್ಬಂದಿಗಳು ಹಾಗೂ ಆಮ್ಲಜನಕ ಪೂರೈಕೆ ಮಾಡುತ್ತಿದ್ದ ಪುಷ್ಪ ಸೇಲ್ಸ್ ಪ್ರೈವೇಟ್ ಲಿಮಿಟೆಡ್'ನ ಇಬ್ಬರು ಅಧಿಕಾರಿಗಳ ವಿರುದ್ಧ ಗಂಭೀರ ನಿರ್ಲಕ್ಷ್ಯ ಅಡಿಯಲ್ಲಿ ಅಧಿಕಾರಿಗಳು ಎಫ್ಐಆರ್ ದಾಖಲಿಸಿಕೊಂಡಿದ್ದಾರೆಂದು ವರದಿಗಳು ತಿಳಿಸಿವೆ. 
ಆಮ್ಲಜನಕ ಪೂರೈಕೆಯಲ್ಲಿ ಕೊರತೆಯುಂಟಾಗಿದ್ದರಿಂದಲೇ 70 ಮಕ್ಕಳು ಸಾವನ್ನಪ್ಪಿರುವುದಾಗಿ ಎಫ್ಐಆರ್ ನಲ್ಲಿ ದಾಲಿಸಲಾಗಿದೆ. ಪ್ರಸಕ್ತ ವರ್ಷ 2017-18 ಸಾಲನಲ್ಲಿ ಆಸ್ಪತ್ರೆಗೆ ಸರ್ಕಾರ ರೂ. 454 ಲಕ್ಷ ನೀಡಿದ್ದು, ಇದರಲ್ಲಿ ರೂ.63.65 ಲಕ್ಷವನ್ನು ಏಪ್ರಿಲ್ ತಿಂಗಳಿನಲ್ಲಿ ಪುಪ್ಪ ಸೇಲ್ಸ್ ಪ್ರೈವೇಟ್ ಲಿಮಿಟೆಡ್ ಗೆ ನೀಡಲಾಗಿದೆ. ಇದಲ್ಲದೆ ಘಟನೆ ನಡೆದಾಗ ಆ.10 ರಂದು ಪ್ರಾಂಶುಪಾಲರಾಗಿದ್ದ ಮಿಶ್ರಾ ಅವರು ಕರ್ತವ್ಯದಲ್ಲಿರದೆ ಗೈರು ಹಾಜರಾಗಿದ್ದರು. ಇದರಿಂದ ಅವರು ಪಿತೂರಿ ನಡೆಸಿರುವುದು ಸಾಬೀತಾಗಿದೆ ಎಂದು ಎಫ್ಐಆರ್ ಹೇಳಲಾಗಿದೆ. 
SCROLL FOR NEXT