ದೇಶ

ರಾಮ್ ರಹೀಂ 'ಅತ್ಯಾಚಾರಿ' ತೀರ್ಪು: ಸುಬ್ರಮಣಿಯನ್ ಸ್ವಾಮಿ ಸಮರ್ಥನೆ

Manjula VN
ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ಡೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ದೋಷಿ ಎಂದು ನ್ಯಾಯಾಲಯ ನೀಡಿದ್ದ ತೀರ್ಪವನ್ನು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರು ಸೋಮವಾರ ಸಮರ್ಥಿಸಿಕೊಂಡಿದ್ದಾರೆ. 
ಈ ಕುರಿತಂತೆ ಮಾತನಾಡಿರುವ ಅವರು. ರಾಮ್ ರಹೀಂ ವಿರುದ್ಧವಿದ್ದ ಸಾಕ್ಷ್ಯಾಧಾರಗಳು ಸ್ಪಷ್ಟವಾಗಿತ್ತು. ಇಂತಹ ಸಂದರ್ಭದಲ್ಲಿ ಖಂಡನೆಗಳು ವ್ಯಕ್ತವಾಗುವುದು ಸರಿಯಲ್ಲ. ರಾಮ್ ರಹೀಮ್ ಅವರಿಗೆ 7 ವರ್ಷಗಳ ಜೈಲು ಶಿಕ್ಷೆಯಂತೂ ಖಚಿತ. ಶಿಕ್ಷಯ ಪ್ರಮಾಣ ಗರಿಷ್ಠ ಜೀವಾವಧಿವರೆಗೂ ಆಗಬಹುದು. ಪರಿಸ್ಥಿತಿ ಹೀಗಿರುವಾಗ ಅವರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. 
ಶಿಕ್ಷೆ ಪ್ರಮಾಣ ಪ್ರಕಟಗೊಳ್ಳುತ್ತಿರುವ ಹಿನ್ನಲೆಯಲ್ಲಿ ಹಲವೆಡೆ ಸಾಕಷ್ಟು ಭದ್ರತೆಗಳನ್ನು ನಿಯೋಜಿಸಲಾಗಿದೆ. ಪರಿಸ್ಥಿತಿ ನಿಭಾಯಿಸಲು ಸೇನಾ ಪಡೆಗಳು ಎಂತಹ ಮಟ್ಟಕ್ಕೆ ಬೇಕಾದರೂ ಇಳಿಯಬಹುದು ಎಂದು ತಿಳಿಸಿದ್ದಾರೆ. 
2002ರಲ್ಲಿ ದಾಖಲಾಗದ ದೂರಿನಂತೆ, ಇಬ್ಬರು ಸಾಧ್ವಿಯರ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಶುಕ್ರವಾರವಷ್ಟೇ ನ್ಯಾಯಾಲಯವು ಬಾಬಾನ್ನು ದೋಷಿ ಎಂದು ತೀರ್ಪು ಪ್ರಕಟಿಸಿತ್ತು. ನ್ಯಾಯಾಲಯ ತೀರ್ಪು ಪ್ರಕಟಿಸುತ್ತಿದ್ದಂತೆ ಹರಿಯಾಣ ಹಾಗೂ ಪಂಜಾಬ್ ಹಿಂಸಾಚಾರದಿಂದ ಹೊತ್ತು ಉರಿಯುತ್ತಿದೆ. 
SCROLL FOR NEXT