ಸಾಂದರ್ಭಿಕ ಚಿತ್ರ 
ದೇಶ

ಅಪ್ರಾಪ್ತೆ ವಿವಾಹವಾಗಲು ನಿರಾಕರಣೆ: ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ವಧುವಿನ ತಂದೆ!

ಮದುವೆ ಸಂದರ್ಭದಲ್ಲಿ ಹುಡುಗಿ ಅಪ್ರಾಪ್ತೆ ಎಂದು ತಿಳಿದ ಹಿನ್ನಲೆಯಲ್ಲಿ ವಿವಾಹವಾಗಲು ನಿರಾಕರಿಸಿದ್ದ ವರನಿಗೆ ವಧುವಿನ ತಂದೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆಯೊಂದು ತಮಿಳುನಾಡಿನ ಕುರಿಲಾಪಟ್ಟಿಯಲ್ಲಿ ಸೋಮವಾರ ನಡೆದಿದೆ...

ವೆಲ್ಲೂರು: ಮದುವೆ ಸಂದರ್ಭದಲ್ಲಿ ಹುಡುಗಿ ಅಪ್ರಾಪ್ತೆ ಎಂದು ತಿಳಿದ ಹಿನ್ನಲೆಯಲ್ಲಿ ವಿವಾಹವಾಗಲು ನಿರಾಕರಿಸಿದ್ದ ವರನಿಗೆ ವಧುವಿನ ತಂದೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆಯೊಂದು ತಮಿಳುನಾಡಿನ ಕುರಿಲಾಪಟ್ಟಿಯಲ್ಲಿ ಸೋಮವಾರ ನಡೆದಿದೆ. 
ಎಸ್. ಕುಮಾರ್ (27) ಥಳಿತಕ್ಕೊಳಗಾದ ಯುವಕನಾಗಿದ್ದಾನೆ. ವೆಲ್ಲಾಕುಟ್ಟೈ ಬಳಿಯ ವಾನಿಯಮ್ಬಾಡಿ ನಿವಾಸಿಯಾಗಿರುವ ಕುಮಾರ್ ಅವರು ತಿರುಚೆಂಗೊಡುವಿನಲ್ಲಿ ಟೆಕ್ಸ್ ಟೈಲ್ ಕಂಪನಿಯೊಂದರಲ್ಲಿ ಪವರ್ಲೂಮ್ ಆಪರೇಟರ್ ಆಗಿ ಕಳೆದ 7 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ.  
ತಿಂಗಳ ಹಿಂದ ಕುಮಾರ್ ಅವರು ತಮ್ಮ ಊರು ವೆಲ್ಲಾಕುಟ್ಟೈಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಎಂ.ಅಣ್ಣಾದುರೈ ಎಂಬುವವರು ಕುಮಾರ್ ಅವರ ಮನೆಗೆ ಬಂದಿದ್ದಾರೆ. ಈ ವೇಳೆ ತಮ್ಮ ಮಗಳನ್ನು ಮದುವೆಯಾಗುವಂತೆ ಪ್ರಸ್ತಾಪವೊಂದನ್ನು ಮುಂದಿಟ್ಟಿದ್ದಾರೆ. ಇದಕ್ಕೆ ಕುಮಾರ್ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಮತ್ತೆ ಕೆಲಸಕ್ಕೆ ಹೊರಟು ಹೋಗಿದ್ದಾರೆ. 
ಗಣೇಶ ಚತುರ್ಥಿ ಹಿನ್ನಲೆಯಲ್ಲಿ ಶುಕ್ರವಾರ ಹುಟ್ಟೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತಮ್ಮ ಮದುವೆಗೆ ತಾಯಿ ಎಲ್ಲಾ  ರೀತಿಯ ಸಿದ್ಧತೆಗಳನ್ನು ಮಾಡಿರುವುದು ತಿಳಿದಿದೆ. ಈ ವೇಳೆ ಶಾಕ್ ಆದ ಕುಮಾರ್ ಅವರನ್ನು ತಾಯಿ ಮನವೊಲಿಸಿ ಶನಿವಾರವಷ್ಟೇ ನಿಶ್ಚಿತಾರ್ಥ ಮಾಡಿದ್ದಾರೆ. ಮರುದಿನ ಭಾನುವಾರವೇ ವಿವಾಹ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ 
ನಿಶ್ಚಿತಾರ್ಥ ನೆರವೇರುವ ಸಂದರ್ಭದಲ್ಲಿ ವಧು ಅಪ್ರಾಪ್ತೆ ಎಂಬುದು ಕುಮಾರ್ ಅವರಿಗೆ ತಿಳಿದಿದೆ. ಈ ವೇಳೆ ಕುಮಾರ್ ಅವರು ಮದುವೆ ನಿರಾಕರಿಸಿದ್ದಾರೆ. ಬಳಿಕ ವಧುವಿನ ತಂದೆ, ಕುಟುಂಬಸ್ಧರು ಕುಮಾರ್ ಅವರೊಂದಿಗೆ ಮಾತಿನ ಚಕಮಕಿಗೆ ಇಳಿಸಿದ್ದಾರೆ. ಹಲವು ಬಾರಿ ಕುಮಾರ್ ಅವರ ಮನವೊಲಿಸಲು ಯತ್ನಿಸಿದ್ದಾರೆ. ಇದಾವುದಕ್ಕೂ ಬಗ್ಗದ ಕುಮಾರ್ ಅವರು ಊರು ಬಿಟ್ಟು ಹೋಗಲು ಯತ್ನಿಸಿದ್ದಾರೆ. 
ಈ ವೇಳೆ ವಧುವಿನ ತಂದೆ ಅಣ್ಣಾದುರೈ ಹಾಗೂ ಅವರ ಪುತ್ರ ಪಾಂಡಿಯಾನ್, ಕೆಲ ಸಂಬಂಧಿಕರು ಸೇರಿ ಕುಮಾರ್ ಅವರನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. 
ತೀವ್ರವಾಗಿ ಗಾಯಗೊಂಡಿದ್ದ ಕುಮಾರ್ ಅವರನ್ನು ಅಂಬೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವೆಲ್ಲೂರು ವೈದ್ಯಕೀಯ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಆಲಂಗಯಮ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ, ಶಾ ಭಯಗೊಂಡಿದ್ದು ನಮ್ಮ ಹೋರಾಟದಲ್ಲಿ ಅರ್ಧ ಗೆದ್ದಿದ್ದೇವೆ, CEC ರಾಜೀನಾಮೆ ನೀಡುವವರೆಗೆ ಹಿಂಜರಿಯುವುದಿಲ್ಲ': ಇಂದು CJP ಪ್ರತಿಭಟನೆ ಮುಂದುವರಿಕೆ

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

CJP ಪ್ರತಿಭಟನೆಗೆ ದೇಶವಿರೋಧಿ ಶಕ್ತಿಗಳ ಸಾಥ್‌: ಭಾರತದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ..!

ಬರದಿಂದ ರೈತರು ಕಂಗಾಲಾಗಿದ್ದರೂ ಸಿಎಂ ಡಿಕೆಶಿಗೆ ಮಾತ್ರ ಸ್ಟಿಂಗ್ ಆಪರೇಷನ್'ನದ್ದೇ ಚಿಂತೆ: HDK ವ್ಯಂಗ್ಯ