ನವದೆಹಲಿ: ಚೀನಾ ಅಧ್ಯಕ್ಷರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಚೀನಾಕ್ಕೆ ಸೆಪ್ಟೆಂಬರ್ 3 ಮತ್ತು 5ರ ನಡುವೆ ಅಲ್ಲಿಗೆ ತೆರಳಲಿದ್ದು 9ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
ಅವರು ಚೀನಾದ ಫುಜಿಯಾನ್ ಪ್ರಾಂತ್ಯದ ಕ್ಸಿಯಾಮೆನ್ ಗೆ ಭೇಟಿ ನೀಡಲಿದ್ದಾರೆ.
ಇದಾದ ಬಳಿಕ ಪ್ರಧಾನಿ, ಸೆಪ್ಟೆಂಬರ್ 5ರಿಂದ 7ರವರೆಗೆ ಮ್ಯಾನ್ಮಾರ್ ಗೆ ಅಲ್ಲಿಗೆ ಅಧ್ಯಕ್ಷ ಯು ಹೆಟಿನ್ ಕ್ವಾವ್ ಆಹ್ವಾನದ ಮೇರೆಗೆ ಭೇಟಿ ನೀಡಲಿದ್ದಾರೆ.
ಮಯನ್ಮಾರ್ ಗೆ ಪ್ರಧಾನಿ ಮೋದಿಯವರ ಮೊದಲ ದ್ವಿಪಕ್ಷೀಯ ಭೇಟಿ ಇದಾಗಿದೆ.