ದೇಶ

ಇಸ್ರೋದ ಮೊದಲ ಸ್ವದೇಶಿ ಪ್ರಾದೇಶಿಕ ದಿಕ್ಸೂಚಿ ಉಪಗ್ರಹ ಉಡಾವಣೆ ವಿಫಲ

Vishwanath S
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಧೆ(ಇಸ್ರೋ)ಯ ಮಹತ್ವಾಕಾಂಕ್ಷಿಯ ಐಆರ್ಎನ್ಎಸ್ಎಸ್-1ಎಚ್ ಉಪಗ್ರಹ ಉಡಾವಣೆ ವಿಫಲವಾಗಿದ್ದು ಇಸ್ರೋಗೆ ಮೊದಲ ಹಿನ್ನೆಡೆಯಾಗಿದೆ. 
ಇಸ್ರೋ ರಾತ್ರಿ 7 ಗಂಟೆ ಸುಮಾರಿಗೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್ಎಲ್ವಿ ಎಕ್ಸ್ ಎಲ್ ಸರಣಿಯ ರಾಕೆಟ್ ಮೂಲಕ ಐಆರ್ಎನ್ಎಸ್ಎಸ್-1ಎಚ್ ಉಪಗ್ರಹವನ್ನು ಉಡಾವಣೆ ಮಾಡಿತ್ತು. ಎರಡು ಹಂತಗಳಲ್ಲಿ ಉಡಾವಣೆ ಯಶಸ್ವಿಯಾಗಿದ್ದು ಮೂರನೇ ಹಂತದಲ್ಲಿನ ಹಿಟ್ ಶೀಟ್ ತೆರೆದುಕೊಳ್ಳದ ಕಾರಣ ಉಪಗ್ರಹ ಸಮುದ್ರಕ್ಕೆ ಬಿದ್ದಿದೆ. 
ಇಸ್ರೋ ಇದೇ ಮೊದಲ ಬಾರಿಗೆ ಖಾಸಗಿ ಸಹಭಾಗಿತ್ವದಲ್ಲಿ ಭಾರತೀಯ ಪ್ರಾದೇಶಿಕ ದಿಕ್ಸೂಚಿ ಉಪಗ್ರಹ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿತ್ತು. 
ಉಪಗ್ರಹ ಯಶಸ್ವಿಯಾಗಿ ಉಡಾವಣೆಯಾಗಿದ್ದರೆ ದಿಕ್ಸೂಚಿ ವ್ಯವಸ್ಥೆಗಾಗಿ ಭಾರತ ವಿದೇಶಿ ಉಪಗ್ರಹಗಳನ್ನು ಅವಲಂಭಿಸಬೇಕಿರಲಿಲ್ಲ. ಆದರೆ ಉಪಗ್ರಹ ಉಡಾವಣೆ ವಿಫಲಗೊಂಡಿರುವುದರಿಂದ ಇಸ್ರೋ ಮತ್ತೊಮ್ಮೆ ಉಪಗ್ರಹ ನಿರ್ಮಾಣಕ್ಕೆ ಕೈಹಾಕುವ ಸಾಧ್ಯತೆ ಇದೆ.
ಐಆರ್​ಎನ್​ ಎಸ್​ಎಸ್- 1ಹೆಚ್ ಈ ಸರಣಿಯ 8ನೇ ಉಪಗ್ರಹವಾಗಿದ್ದು, ಸುಮಾರು 1,420 ಕೋಟಿ ರೂ. ವೆಚ್ಚದಲ್ಲಿ ಐಆರ್​ಎನ್​ಎಸ್​ಎಸ್- 1ಹೆಚ್ ಉಪಗ್ರಹ ನಿರ್ಮಾಣ ಮಾಡಲಾಗಿತ್ತು.
SCROLL FOR NEXT