ನವದೆಹಲಿ: ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೊದಿ ಏನನ್ನು ಮಾತನಾಡಲಿದ್ದಾರೆ ಎಂಬುದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ವಿದೇಶಾಂಗ ಇಲಾಖೆ ಹೇಳಿದೆ.
ಬ್ರಿಕ್ಸ್ ಶೃಂಗಸಭೆ ಪಾಕಿಸ್ತಾನದ ಭಯೋತ್ಪಾದನೆ ಕುರಿತು ಭಾರತಕ್ಕಿರುವ ಆತಂಕವನ್ನು ಚರ್ಚಿಸಲು ಸೂಕ್ತ ವೇದಿಕೆ ಅಲ್ಲ ಎಂದು ಚೀನಾ ಹೇಳಿದ ಬೆನ್ನಲ್ಲೇ ಎಂಇಎ ಈ ಹೇಳಿಕೆ ನೀಡಿದೆ. ಇದೇ ವೇಳೆ ಚೀನಾ ಅಧ್ಯಕ್ಷರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಲಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ವಿದೇಶಾಂಗ ಇಲಾಖೆಯ ವಕ್ತಾರ ರವೀಶ್ ಕುಮಾರ್, ಶೃಂಗಸಭೆಯ ಪಾರ್ಶ್ವದಲ್ಲಿ ದ್ವಿಪಕ್ಷೀಯ ಸಭೆ ನಡೆಯುವುದು ಈ ವರೆಗೂ ನಡೆದುಬಂದಿರುವ ಪದ್ಧತಿ, ಆದರೆ ಸಮಯ ಮತ್ತು ವಿವರಣೆಗಳನ್ನು ನೀಡುವ ಸ್ಥಿತಿಯಲ್ಲಿ ಇಲ್ಲ ಎಂದು ಹೇಳಿದ್ದಾರೆ.