ಪಾಂಡಿಚೇರಿ: ಡೆಡ್ಲಿ ಬ್ಲೂವೇಲ್ ಭೂತಕ್ಕೆ ಭಾರತದಲ್ಲಿ ಮತ್ತೊಂದು ಬಲಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಪಾಂಡಿಚೇರಿಯಲ್ಲಿ ಎಂಬಿಎ ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪಾಂಡಿಚೇರಿ ವಿವಿ ವಿದ್ಯಾರ್ಥಿ ಶಶಿ ಬಸುಮಾತಾರಿ ಎಂಬ ವಿದ್ಯಾರ್ಥಿ ವಿವಿ ಹಾಸ್ಟೆಲ್ ಆವರಣದಲ್ಲಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಚಾರ ತಿಳಿದ ಕೂಡಲೇ ವಿವಿಯಾದ್ಯಂತ ತೀವ್ರ ಎಚ್ಚರಿಕೆ ವಹಿಸಲಾಗಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ. ಸ್ಥಳಕ್ಕಾಗಮಿಸಿರುವ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆ ರವಾನಿಸಿದ್ದಾರೆ.
ಮೃತ ವಿದ್ಯಾರ್ಥಿ ಶಶಿ ಬಸುಮಾತಾರಿ ವಿವಿಯಲ್ಲಿ ಮೊದಲ ವರ್ಷದ ಎಂಬಿಎ ಪದವಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಇನ್ನು ಶಶಿ ಬಸುಮಾತಾರಿ ಸಾವಿಗೆ ಬ್ಲೂವೇಲ್ ಗೇಮ್ ಕಾರಣ ಎಂಬ ಶಂಕೆ ವ್ಯಕ್ತವಾಗುತ್ತಿದ್ದು, ಹಾಸ್ಟೆಲ್ ನಲ್ಲಿ ಸಾದಾಕಾಲ ಈತ ಸ್ಮಾರ್ಟ್ ಫೋನ್ ಅಂಟಿಕೊಂಡಿರುತ್ತಿದ್ದ ಎಂದು ಸಹಪಾಠಿಗಳು ಹೇಳಿದ್ದಾರೆ.
ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನು ವಿದ್ಯಾರ್ಥಿ ಸಾವಿನ ಬೆನ್ನಲ್ಲೇ ಪಾಂಡಿಚೇರಿ ವಿವಿ ಆಂತರಿಕ ತನಿಖೆಗೆ ಆದೇಶಿಸಿದೆ ಎಂದು ತಿಳಿದುಬಂದಿದೆ.
ಇನ್ನು ವಿದ್ಯಾರ್ಥಿ ಆತ್ಮಹತ್ಯೆ ಹಿಂದೆ ಬ್ಲೂವೇಲ್ ಗೇಮ್ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.