ನರೇಂದ್ರ ಮೋದಿ 
ದೇಶ

ಪ್ರಾಮಾಣಿಕ ತೆರಿಗೆದಾರರೊಂದಿಗೆ ಸ್ನೇಹದಿಂದ ವರ್ತಿಸಿ: ತೆರಿಗೆ ಅಧಿಕಾರಿಗಳಿಗೆ ಪ್ರಧಾನಿ ಸಲಹೆ

ಪ್ರಾಮಾಣಿಕವಾಗಿ ತೆರಿಗೆ ಕಟ್ಟುವವರೊಂದಿಗೆ ಸ್ನೇಹಿದಿಂದ ವರ್ತಿಸುವ ಮೂಲಕ ತೆರಿಗೆದಾರನ ಭಯವನ್ನು ಅಂತ್ಯಗೊಳಿಸಿ ಭಾರತವನ್ನು....

ನವದೆಹಲಿ: ಪ್ರಾಮಾಣಿಕವಾಗಿ ತೆರಿಗೆ ಕಟ್ಟುವವರೊಂದಿಗೆ ಸ್ನೇಹಿದಿಂದ ವರ್ತಿಸುವ ಮೂಲಕ ತೆರಿಗೆದಾರನ ಭಯವನ್ನು ಅಂತ್ಯಗೊಳಿಸಿ ಭಾರತವನ್ನು ಹೆಚ್ಚು ತೆರಿಗೆ ಸಲ್ಲಿಸುವ ಸಮಾಜವನ್ನಾಗಿ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. 
ಇಂದು ನೇರ ಮತ್ತು ಪರೋಕ್ಷ ತೆರಿಗೆ ಅಧಿಕಾರಿಗಳ ರಾಜಸ್ವ ಗ್ಯಾನ್ ಸಂಗಮದ ಎರಡನೇ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ಸ್ವಾತಂತ್ರ್ಯದ ನಂತರದ ದೊಡ್ಡ ತೆರಿಗೆ ಸುಧಾರಣೆಯ ಪ್ರಯೋಜನ, ಜಿಎಸ್ಟಿ ಮತ್ತು ಬೆಲೆಗಳು ಕಡಿಮೆಯಾಗಿರುವುದನ್ನು ಸಾಮಾನ್ಯ ವ್ಯಕ್ತಿಗೆ ತಲುಪುವಂತೆ ನೋಡಿಕೊಳ್ಳಿ ಎಂದರು.
ಎರಡು ದಿನಗಳ ಈ ಸಮ್ಮೇಳನದಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (ಸಿಬಿಡಿಟಿ) ಮತ್ತು ಸೆಂಟ್ರಲ್ ಬೋರ್ಡ್ ಆಫ್ ಎಕ್ಸೈಸ್ ಮತ್ತು ಕಸ್ಟಮ್ಸ್ (ಸಿಬಿಇಸಿ)ಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮ ಕಡೆಯಿಂದ ವೈಮಾನಿಕ ದಾಳಿ ಇರುವುದಿಲ್ಲ: 5 ವರ್ಷಗಳಲ್ಲಿ ಮೊದಲ ಬಾರಿಗೆ ಕದನ ವಿರಾಮ ಪ್ರಸ್ತಾಪಿಸಿದ ಯುಕ್ರೇನ್ ಅಧ್ಯಕ್ಷ Zelensky

ಡ್ರಗ್ಸ್ ಸೇವನೆ ದೃಢ: ಫುಕೆಟ್- ದೆಹಲಿ ಏರ್ ಇಂಡಿಯಾ ವಿಮಾನದ ಮುಖ್ಯ ಪೈಲಟ್ ವಜಾ!

Video: 'ಪೊಲೀಸರು ಬುದ್ದಿ ಕಲಿಸಿದ್ದಾರೆ, ತಪ್ಪನ್ನ ಕ್ಷಮಿಸಲ್ಲ'; ಮಗ ಸಾಮ್ರಾಟ್‌ ಬಗ್ಗೆ ಕೊನೆಗೂ ಮೌನ ಮುರಿದ ನಟ Duniya Vijay

‘ಹೂತುಹಾಕಬೇಕು ಎನ್ನುವವರಲ್ಲ ನಾವು’.. ‘ಮಹಿಳೆಯರಿಗೆ ಶಿಕ್ಷಣ, ಅವಕಾಶ ನೀಡುತ್ತಿದ್ದೇವೆ’: ‘ಮನೆಯಲ್ಲೇ ಇರಬೇಕು’ ಹೇಳಿಕೆಗೆ ಮುಸ್ಲಿಂ ಧರ್ಮಗುರು ಸ್ಪಷ್ಟನೆ, Video

ಜಮ್ಮು-ಕಾಶ್ಮೀರ: ಬುಡ್ಗಾಮ್‌ ಎನ್ ಕೌಂಟರ್ ನಲ್ಲಿ ಉಗ್ರನ ಹತ್ಯೆ; AK ರೈಫಲ್ ಮತ್ತಿತರ ಶಸ್ತ್ರಾಸ್ತ್ರಗಳು ವಶ!