ದೇಶ

ಕೇರಳ: ಮದ್ಯಪಾನ ವಯಸ್ಸಿನ ಮಿತಿಯನ್ನು 21ರಿಂದ 23ಕ್ಕೆ ಏರಿಕೆ

Vishwanath S
ತಿರುವನಂತಪುರ: ಕೇರಳ ಸರ್ಕಾರ ಮದ್ಯಪಾನ ಮಾಡುವವರ ವಯಸ್ಸಿನ ಮಿತಿಯನ್ನು 21ರಿಂದ 23ಕ್ಕೆ ಏರಿಸಲು ನಿರ್ಧರಿಸಿದೆ. 
ಅಬಕಾರಿ ಕಾಯ್ದೆಯಲ್ಲಿ ಸ್ವಲ್ಪ ತಿದ್ದುಪಡಿ ತಂದು ಆ ಮೂಲಕ ಸುಗ್ರೀವಾಜ್ಞೆ ಹೊರಡಿಸಿ ವಯಸ್ಸಿನ ಮಿತಿಯನ್ನು 21ರಿಂದ 23ಕ್ಕೆ ಏರಿಸಲು ನಿರ್ಧರಿಸಿದೆ. 
ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಹಂತ ಹಂತವಾಗಿ ಮದ್ಯ ಮಾರಾಟವನ್ನು ನಿಷೇಧಿಸುವ ಉದ್ದೇಶ ಹೊಂದಿತ್ತು. ಹೀಗಾಗಿ 2015ರಲ್ಲಿ ಪಂಚತಾರಾ ಹೋಟೆಲ್ ಗಳಲ್ಲಿ ಮಾತ್ರ ಐಎಂಎಫ್ಎಲ್ ಮದ್ಯ ಮಾರಾಟಕ್ಕೆ ಅವಕಾಶ ನೀಡಿತ್ತು. 
ನಂತರ ಸುಪ್ರೀಂಕೋರ್ಟ್ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಮದ್ಯ ಮಾರಾಟ ನಿಷೇಧಿಸಿದ್ದರಿಂದ ಮತ್ತಷ್ಟು ಬಾರ್ ಗಳು ಮುಚ್ಚಿದವು. ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಅಬಕಾರಿ ಸಚಿವ ಟಿಪಿ ರಾಮಕೃಷ್ಣನ್ ಮದ್ಯ ನಿಷೇಧ ವಿಶ್ವದ ಯಾವ ಭಾಗದಲ್ಲೂ ಯಶಸ್ಸು ಕಂಡಿಲ್ಲ. ಈ ಹಿನ್ನೆಲಯಲ್ಲಿ ವಯಸ್ಸಿನ ಮಿತಿಯನ್ನು ಏರಿಕೆ ಮಾಡಲಾಗಿದೆ ಎಂದರು. 
SCROLL FOR NEXT