ಸೂರತ್: ಕಾಂಗ್ರೆಸ್ ನ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ, ಗುಜರಾತ್ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರನ್ನು ಗುಜರಾತ್ ನ ಮುಖ್ಯಮಂತ್ರಿಯಾಗಿಸಲು ಬೆಂಬಲ ಕೋರಿರುವ ಪೋಸ್ಟರ್ ಗಳು ಸೂರತ್ ನಲ್ಲಿ ಕಂಡುಬಂಡಿದೆ.
ಮುಸ್ಲಿಮರು ಒಗ್ಗಟ್ಟಿನಿಂದ ಇರಲು ಅಹ್ಮದ್ ಪಟೇಲ್ ಮುಖ್ಯಮಂತ್ರಿಯಾಗಬೇಕು, ಈ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದವರು ಕಾಂಗ್ರೆಸ್ ಗೆ ಮತ ನೀಡಬೇಕು ಎಂದು ಪೋಸ್ಟರ್ ನಲ್ಲಿ ಕರೆ ನೀಡಲಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಅಹ್ಮದ್ ಪಟೇಲ್ ನಾನು ಗುಜರಾತ್ ನ ಮುಖ್ಯಮಂತ್ರಿ ಹುದ್ದೆಯ ರೇಸ್ ನಲ್ಲಿಲ್ಲ. ಇದು ಬಿಜೆಪಿಯ ಷಡ್ಯಂತ್ರ 22 ವರ್ಷಗಳ ವೈಫಲ್ಯವನ್ನು ಮರೆಮಾಚಲು ವಿಷಯಾಂತರ ಮಾಡುತ್ತಿದೆ ಎಂದು ಅಹ್ಮದ್ ಪಟೇಲ್ ಆರೋಪಿಸಿದ್ದಾರೆ.