ದೇಶ

ಪ್ರತ್ಯೇಕತಾವಾದಿಗಳಿಂದ ಟ್ರಂಪ್ ವಿರುದ್ಧ ಪ್ರತಿಭಟನೆ, ಕಾಶ್ಮೀರದಲ್ಲಿ ವ್ಯಾಪಕ ಭದ್ರತೆ

Raghavendra Adiga
ಶ್ರೀನಗರ: ಕಾಶ್ಮೀರ ಪ್ರತ್ಯೇಕತಾವಾದಿಗಳು ಅಮೆರ್ಕ ವಿರೋಧಿ ಪ್ರತಿಭಟನೆಯನ್ನು ನಡೆಸಲು ಉದ್ದೇಶಿಸಿದ್ದು ಇದಕ್ಕೆ ಅಧಿಕಾರಿಗಳು ವಿರೋಧ ವ್ಯಕ್ತಪಡಿಸಿರುವುದಲ್ಲದೆ ಶ್ರೀನಗದಾದ್ಯಂತ ಭಾಗಶಃ ನಿರ್ಬಂಧ ವಿಧಿಸಲಾಗಿದೆ.
ಹಿರಿಯ ಪ್ರತ್ಯೇಕತಾವಾದಿ ನಾಯಕರು ಸೈಯದ್ ಅಲಿ ಗೀಲಾನಿ, ಮಿರ್ವೈಜ್ ಉಮರ್ ಫಾರೂಕ್ ಮತ್ತು ಮುಹಮ್ಮದ್ ಯಾಸಿನ್ ಮಲಿಕ್ ಸೇರಿದಂತೆ ಇಸ್ರೇಲ್ ರಾಜಧಾನಿಯಾಗಿ ಜೆರುಸಲೆಮ್ ಗುರುತಿಸಲು ಯು.ಎಸ್. ಅಧ್ಯಕ್ಷ ಡೊನಾಲ್ಡ್ ಟ್ರಮ್ಪ್ನ ನಿರ್ಧಾರದ ನಂತರದ ಶುಕ್ರವಾರ ಪ್ರಾರ್ಥನೆ ಪ್ರತಿಭಟನೆ ನಡೆಸಿದರು.
ಹಳೆ ಶ್ರೀನಗರದ ನೌಹಟ್ಟಾ, ಎಮ್ಆರ್ ಗುಂಜ್ ಮತ್ತು ಸಫಾ ಕಾದಲ್ ಪ್ರದೇಶಗಳಲ್ಲಿ ನಿರ್ಬಂಧಗಳನ್ನು ಹೇರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಿರ್ವೈಜ್ ಉಮರ್ ಫಾರೂಕ್ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ ಮತ್ತು ಸೈಯದ್ ಅಲಿ ಗೀಲಾನಿ ಈಗಾಗಲೇ ಗೃಹಬಂಧನದಲ್ಲಿದ್ದಾರೆ. ಮೂರೂ ಪ್ರದೇಶಗಳಲ್ಲಿ ಪೊಲೀಸರು ಮತ್ತು ಅರೆಸೈನಿಕ ಕೇಂದ್ರೀಯ ರಿಸರ್ವ್ ಪೋಲೀಸ್ (ಸಿ ಆರ್ ಪಿ ಎಫ್) ಪಡೆಗಳು ಭಾರೀ ಭದ್ರತೆ ಒದಗಿಸಿದೆ
ಪವಿತ್ರ ನಗರ ಜೆರುಸಲೆಂನ್ನು ನಿನ್ನೆ ಡೊನಾಲ್ಡ್ ಟ್ರಂಪ್ ಇಸ್ರೇಲ್ ರಾಜಧಾನಿಯನ್ನಾಗಿ ಘೋಷಿಸಿದ್ದಲ್ಲದೆ ಅಮೆರಿಕ ದೂತವಾಸವನ್ನು ಟೆಕ್ ಅವೀವ್ ನಿಂದ ಜೆರುಸಲೆಂ ಗೆ ಸ್ಥಳಾಂತರಿಸಲು ಮುಂದಾಗಿದ್ದಾರೆ. ಇದನ್ನು ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಸೇಇ ಯಹೂದಿ ಸಮುದಾಯ ಸ್ವಾಗತಿಸಿದ್ದರೆ ಅರಬ್ ರಾಷ್ಟ್ರಗಳು, ಪ್ಯಾಲಸ್ತೈನ್ ಮಾತ್ರ ಕಟುವಾಗಿ ವಿರೋಧಿಸಿದೆ.
ಈ ನಡುವೆ "ನಾನು ಈಗ ಸುಮ್ಮನಿರಲು ಸಾಧ್ಯವಿಲ್ಲ, ಟ್ರಂಪ್‌ ನಡೆಯು ಪವಿತ್ರ ನಗರದಲ್ಲಿ ಹೊಸ ಸಂಘರ್ಷಕ್ಕೆ ಎಡೆ ಮಾಡಿಕೊಡಲಿದೆ" ಎಂದು ಪೋಪ್‌ ಫ್ರಾನ್ಸಿಸ್‌ ಸಹ ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್‌,"ಇಸ್ರೇಲ್‌ ಮತ್ತು ಪ್ಯಾಲೆಸ್ಟಿನ್‌ ಎರಡು ಕಡೆಯ ಅಭಿಪ್ರಾಯಪಡೆದು ಶಾಂತಿಯುತವಾಗಿ ಈ ಸಮಸ್ಯೆಯನ್ನು ಬಗೆಹರಿಸಬಹುದಾಗಿತ್ತು" ಎಂದಿದ್ದರು
ಟ್ರಂಪ್ ಈ ನಡೆಯನ್ನು ವಿರೋಧಿಸಿ ಇಸ್ರೇಲ್, ಪ್ಯಾಲಸ್ತೈನ್ ಎರಡೂ ಕಡೆಗಳಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿದ್ದು ಇದೀಗ ಕಾಶ್ಮೀರ ಪ್ರತ್ಯೇಕತಾವಾದಿಗಊ ಇದಕ್ಕೆ ಕೈಜೋಡೊಸೊರುವುದು ಭಾರತದ ಆತಂಕಕ್ಕೆ ಕಾರಣವಾಗಿದೆ.
SCROLL FOR NEXT