ಜೈಪುರು: ರಾಜಸ್ತಾನದ ರಾಜ್‌ಸಮಂದ್ ಜಿಲ್ಲೆಯಲ್ಲಿ 'ಲವ್ ಜಿಹಾದ್' ಗೆ ಸಜೀವವಾಗಿ ದಹನವಾದ ಮುಸ್ಲಿಂ ವ್ಯಕ್ತಿಯ ಕುಟುಂಬಕ್ಕೆ ಅಲ್ಲಿನ ರಾಜ್ಯ ಸರ್ಕಾರ ಶನಿವಾರ 5 ಲಕ್ಷ ರುಪಾಯಿ ಪರಿಹಾರ ಘೋಷಿಸಿದೆ.
'ಲವ್ ಜಿಹಾದ್' ಆರೋಪದ ಮೇಲೆ ಮುಸ್ಲಿಂ ಕಾರ್ಮಿಕನನ್ನು ಸಜೀವವಾಗಿ ದಹಿಸಿದ್ದ ವೀಡಿಯೋ ಇಡೀ ದೇಶವನ್ನು ಬೆಚ್ಚಿ ಬಿಳಿಸಿತ್ತು. ರಾಜ್‌ಸಮಂದ್ ಪ್ರದೇಶದ ದೇವ ಪರಂಪರೆ ರಸ್ತೆಯಲ್ಲಿ ಈ ಪೈಶಾಚಿಕ ಕೃತ್ಯ ನಡೆದಿದ್ದು, ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಲಾಗಿತ್ತು. ಈ ಸಾಕ್ಷ್ಯದ ಆಧಾರದ ಮೇಲೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
'ಲವ್ ಜಿಹಾದ್' ಬಲಿಯಾದ ವ್ಯಕ್ತಿಯನ್ನು ಬೆಂಗಾಳಿ ಮೂಲದ ಮೊಹಮ್ಮದ್ ಅಫ್ರಜುಲ್ಲಾ ಖಾನ್ ಎಂದು ಗುರುತಿಸಲಾಗಿದ್ದು, ರಾಜಸ್ತಾನಕ್ಕೆ ವಲಸೆ ಬಂದಿದ್ದ. ಹತ್ಯೆ ಮಾಡಿದ ಆರೋಪಿ ಶಂಭುಲಾಲ್ ರಾಯಗರ್ ಎಂದು ಗುರುತಿಸಲಾಗಿದೆ.
ಪೈಶಾಚಿಕ ಕೃತ್ಯ ನಡೆಸಿದ ವ್ಯಕ್ತಿ ಸಾಮಾನ್ಯ ಮನುಷ್ಯರಂತೆ ಇಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವುದಾಗಿ ರಾಜಸ್ತಾನ ಪೊಲೀಸ್ ಮಹಾ ನಿರ್ದೇಶಕರು ತಿಳಿಸಿದ್ದಾರೆ.