ರಾಣಿ ಗಾಯತ್ರಿ ದೇವಿ ಮೊಮ್ಮಕ್ಕಳು ಆಸ್ತಿಯ ನೈಜ ಹಕ್ಕುದಾರರು, ದೆಹಲಿ ಹೈ ಕೋರ್ಟ್ ತೀರ್ಪು] 
ದೇಶ

ರಾಣಿ ಗಾಯತ್ರಿ ದೇವಿ ಮೊಮ್ಮಕ್ಕಳು ಆಸ್ತಿಯ ನೈಜ ಹಕ್ಕುದಾರರು, ದೆಹಲಿ ಹೈ ಕೋರ್ಟ್ ತೀರ್ಪು

ರಾಜಮಾತೆ ಗಾಯತ್ರಿ ದೇವಿಯ ಇಬ್ಬರು ಮೊಮ್ಮಕ್ಕಳು ಅವರ ಕಾನೂನುಬದ್ಧ ಉತ್ತರಾಧಿಕಾರಿಗಳಾಗಿರುವುದಾಗಿ ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ

ನವದೆಹಲಿ: ರಾಜಮಾತೆ  ಗಾಯತ್ರಿ ದೇವಿಯ ಇಬ್ಬರು ಮೊಮ್ಮಕ್ಕಳು ಅವರ ಆಸ್ತಿಗಳಿಗೆ  ಕಾನೂನುಬದ್ಧ ಉತ್ತರಾಧಿಕಾರಿಗಳಾಗಿರುವುದಾಗಿ ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ ಇದರೊಡನೆ ಗಾಯತ್ರಿದೇವಿಯ ಮಲಮಗನಿಗೆ ಅವರ ಆಸ್ತಿಯಲ್ಲಿ ಪಾಲು ಇದೆ ಎನ್ನುವ  ಈ ಹಿಂದಿನ ತೀರ್ಪಿನ್ನು ತಳ್ಳಿ ಹಾಕಿದೆ..ಗಾಯತ್ರಿ ದೇವಿ ಮರಣದ ತರುವಾಯ ಅವರ ಆಸ್ತಿ ಯಾರ ಪಾಲಾಗಲಿದೆ ಎನ್ನುವದರ ಕುರಿತು ವಿವಾದ ಉದ್ಭವಿಸಿತ್ತು.
ಲಾಲಿತ್ಯಾ  ಅವರು ತನ್ನ ತಂದೆ ಜಗತ್ ಸಿಂಗ್ ಹಾಗೂ ಜಗತ್ ಸಿಂಗ್, ಸವಾಯಿ ಮಾನ್ ಸಿಂಗ್ ಅವರ ಪುತ್ರ ಎಂದು ಹೈ ಕೋರ್ಟ್ ನಲ್ಲಿ ವಾದಿಸಿದ್ದರು. ಥಾಯ್ ಲ್ಯಾಂಡಿನ ರಾಜಕುವರಿ ಮಾಮ್ ರಾಜವಾಂಗ್ಸೆ ಪ್ರಿಯನಂದನ ಅವರನ್ನು ವಿವಾಹವಾಗಿದ್ದ ಜಗತ್ ಸಿಂಗ್ ತನ್ನೆಲ್ಲಾ ಆಸ್ತಿಗೆ ರಾಣಿ ಗಾಯತ್ರಿ ದೇವಿ ಹಕ್ಕುದಾರಳೆಂದು ಮರಣ ಶಾಸನ ಬರೆದಿಟ್ಟಿದ್ದರು. 
 ಜುಲೈ 29, 2009 ರಂದು ಗಾಯತ್ರಿ ದೇವಿ,ನಿಧನದ ನಂತರ, ಪ್ರಸ್ತುತ ಬ್ಯಾಂಕಾಕ್ ನಲ್ಲಿ  ವಾಸ್ತವ್ಯವಿರುವ ತನ್ನ ಮೊಮ್ಮಕ್ಕಳು ದೇವರಾಜ ಹಾಗೂ ಲಾಲಿತ್ಯ ಅವರುಗಳು ತಾವು  ಸಂಪೂರ್ಣ ಆಸ್ತಿಗೆ ಹಕ್ಕುದಾರರೆರೆಂದು ಹೈ ಕೋರ್ಟ್ ಗೆ ಮಾಹಿತಿ ನೀಡಿದ್ದರು. ಇದೇ ವೇಳೆ ಲಾಲಿತ್ಯ ಹಾಗೂ ದೇವರಾಜ್ ಜತೆ ಜತೆಗೇ ಸವಾಯಿ ಮಾನ್ ಸಿಂಗ್ ಅವರ ಇನ್ನೋರ್ವ ಪತ್ನಿಯಲ್ಲಿ ಜನಿಸಿದ ಜಯ್ ಸಿಂಗ್ ಹಾಗು ಪ್ರಥ್ವಿರಾಜ್ ಸಿಂಗ್ ಅವರುಗಳು ಸಹ ಗಾಯತ್ರಿ ದೇವಿಯ ಆಸ್ತಿ ತಮಗೆ ಸೇರಬೇಕೆಂದು ಕೋರ್ಟ್ ಕಟ್ಕಟೆ ಏರಿದ್ದರು. ಆ ಸಂಬಂಧ ಕೋರ್ಟ್ 2010  ಕ್ಕೆ ಅವರ ಪರವಾಗಿ ತೀರ್ಪು ನೀಡೀತ್ತು. ಆದರೆ ಮತ್ತೆ ಮೇಲ್ಮನವಿ  ಸಲ್ಲಿಸಿದ ಲಾಲಿತ್ಯ ಹಾಗೂ ದೇವರಾಜ್ ಪರವಾಗಿ ಇದೀಗ ನ್ಯಾಯಮೂರ್ತಿ ಎಸ್.ರವೀಂದ್ರ ಭಟ್ ತೀರ್ಪು  ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!