ಶಿಮ್ಲಾ: ಇಲ್ಲಿನ ಹೊರವಲಯದ ದಲ್ಲಿ ಎಂಬಲ್ಲಿ 12 ವರ್ಷದ ಬಾಲಕ 5 ವರ್ಷದ ಬಾಲಕಿಯನ್ನು ಅತ್ಯಾಚಾರವೆಸಗಿದ ವಿಲಕ್ಷಣ ಘಟನೆ ನಡೆದಿದೆ.
ನಿನ್ನೆ ಈ ಘಟನೆ ನಡೆದಿದ್ದು ಇಂದು ಬಾಲಕಿಯ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 5 ವರ್ಷದ ಪುಟ್ಟ ಬಾಲಕಿ ತನ್ನ ಮನೆಯ ಹೊರಗೆ ಆಟವಾಡುತ್ತಿರುವಾಗ ಅಲ್ಲಿಗೆ ಬಂದ ಬಾಲಕ ಲೈಂಗಿಕ ಹಲ್ಲೆ ನಡೆಸಿದ್ದಾನೆ.
ನೇಪಾಳಿ ಮೂಲದ ಕಾರ್ಮಿಕ ದಂಪತಿಯ ಮಗಳಾದ ಬಾಲಕಿ ಮೇಲೆ ಅಲ್ಲಿನ ಜಮೀನ್ದಾರನ ಮಗ ಅತ್ಯಾಚಾರವೆಸಗಿದ್ದಾನೆ.
ಪೊಕ್ಸೊ ಕಾಯ್ದೆಯಡಿ ಬಾಲಕಿಗೆ ಪೋಷಕರು ನೀಡಿದ ದೂರಿನ ಮೇರೆಗೆ ಕೇಸು ದಾಖಲಿಸಲಾಗಿದೆ.
ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು ವರದಿಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.