ದೇಶ

ಗುಜರಾತಿನ ಈ ಹಳ್ಳಿಯಲ್ಲಿ ಶೂನ್ಯ ಮತದಾನ!

Raghavendra Adiga
ಅಹಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ನಿನ್ನೆಯಷ್ಟೇ ಮುಗಿದಿದೆ. ಇದರಲ್ಲಿ  ಒಟ್ಟಾರೆ  ಶೇ. 68 ಮತದಾನವಾಗಿತ್ತು. ಆದರೆ ಇದೇ ವೇಳೆ ಗುಜರಾತಿನ ಒಂದು ಹಳ್ಳಿಯಲ್ಲಿ ಮಾತ್ರ ಶೂನ್ಯ ಮತದಾನವಾಗಿದೆ.
ಗುಜರಾತಿನ ಮೋರ್ಬಿ ಜಿಲ್ಲೆಯ ಗಜಡಿ ಗ್ರಾಮಸ್ಥರು ಈ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ. ಗ್ರಾಮದಲ್ಲಿನ ನೀರಿನ ಸಮಸ್ಯೆಯನ್ನು ಸೂಕ್ತ ರೀತಿಯಲ್ಲಿ ಪರಿಹರಿಸದ ಕಾರಣ ಗ್ರಾಮದ ಜನತೆ ಈ ಚುನಾವಣೆ ಬಹಿಷ್ಕಾರದ ನಿರ್ಧಾರಕ್ಕೆ ಬಂದಿದ್ದರು.
ಗ್ರಾಮದಲ್ಲಿ ಮತದಾರರ ಪಟ್ಟಿಯಲ್ಲಿ ನೊಂದಣಿಯಾಗಿದ್ದ ಒಟ್ಟು 1,000 ಮಂದಿಯಲ್ಲಿ ಯಾರೂ ಸಹ ಮತದಾನ ಮಾಡಲಿಲ್ಲ. ಹೀಗಾಗಿ ಗ್ರಾಮದ ಮತಗಟ್ಟೆ ಬೆಳಗಿನಿಂದ ಸಂಜೆಯವರೆಗೂ ಖಾಲಿ ಹೊಡೆಯುತ್ತಿತ್ತು. ಮತದಾನ ಪ್ರಕ್ರಿಯೆಗಾಗಿ ನೇಮಕವಾಗಿದ್ದ ಚುನಾವಣಾ ಸಿಬ್ಬಂದಿಗಳು ಸಹ ಅಂತಿಮವಾಗಿ ಶೂನ್ಯ ಮತದಾನ ಎಂದು ದಾಖಲಿಸಿಕೊಂಡರು..
SCROLL FOR NEXT