ಬೀಜಿಂಗ್: ಪಶ್ಚಿಮ ಕ್ಸಿನ್ ಜಿಯಾಂಗ್ ಪ್ರದೇಶದಲ್ಲಿ ಚೀನಾದ ಅಧಿಕಾರಿಗಳು ಅಲ್ಲಿನ ಲಕ್ಷಾಂತರ ಜನರ ಡಿಎನ್ಎ ಮಾದರಿ ಹಾಗೂ ಬೆರಳಚ್ಚುಗಳು ಸೇರಿದಂತೆ ಬಯೋಮೆಟ್ರಿಕ್ ಡಾಟ ಸಂಗ್ರಹಿಸುತ್ತಿದ್ದಾರೆ ಎಂದು ವರದಿಯೊಂದರ ಮೂಲಕ ತಿಳಿದುಬಂದಿದೆ.
12-65 ವರ್ಷದವರ ಬಯೋಮೆಟ್ರಿಕ್ ವಿವರಗಳನ್ನು ಸಂಗ್ರಹಿಸಲಾಗುತ್ತಿದ್ದು, ಧಾರ್ಮಿಕತೆ, ಅಭಿಪ್ರಾಯ, ಹಾಗೂ ವಾಕ್ ಸ್ವಾತಂತ್ರ್ಯಗಳ ಅಡಿಯಲ್ಲಿ ವ್ಯಕ್ತಿಗಳ ಮೇಲೆ ನಿಗಾ ವಹಿಸಲು ಈ ರೀತಿಯಲ್ಲಿ ಬಯೋಮೆಟ್ರಿಕ್ ಡಾಟಾ ಸಂಗ್ರಹಿಸಲಾಗುತ್ತಿದೆ ಎಂದು ಗಾರ್ಡಿಯನ್ ಪತ್ರಿಕೆಯ ವರದಿ ಹೇಳಿದೆ.
ಕ್ಸಿನ್ ಜಿಯಾಂಗ್ ಪ್ರದೇಶದಲ್ಲಿ ಉಯ್ಘರ್ ಮುಸ್ಲಿಮರು ಅಲ್ಪಸಂಖ್ಯಾತರಾಗಿದ್ದು, ಈ ಪ್ರದೇಶದಲ್ಲಿ ಚೀನಾ ಅತಿ ಹೆಚ್ಚು ಶಸ್ತ್ರಸಜ್ಜಿತ ಪಡೆಗಳನ್ನು ನಿಯೋಜಿಸಿರುವುದು ಸಾಮಮನ್ಯ ದೃಶ್ಯವಾಗಿ ಕಾಣುತ್ತದೆ.