ದೇಶ

ಗಂಗಾ ನದಿ ದಂಡೆಯ ನಗರ, ಪಟ್ಟಣಗಳಲ್ಲಿ ಪ್ಲಾಸ್ಟಿಕ್ ನಿಷೇಧಿಸಿದ ಎನ್ ಜಿಟಿ

Lingaraj Badiger
ನವದೆಹಲಿ: ಹರಿದ್ವಾರ, ಹೃಷಿಕೇಶ ಸೇರಿದಂತೆ ಗಂಗಾ ನದಿ ದಂಡೆಯಲ್ಲಿರುವ ನಗರ ಹಾಗೂ ಪಟ್ಟಣಗಳಲ್ಲಿ ಕ್ಯಾರಿ ಬ್ಯಾಗ್, ಪ್ಲೇಟ್ ಗಳು ಸೇರಿದಂತೆ ಎಲ್ಲಾ ರೀತಿಯ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮತ್ತು ಮಾರಾಟವನ್ನು ನಿಷೇಧಿಸಿ ಶುಕ್ರವಾರ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್ ಜಿಟಿ) ಆದೇಶ ಹೊರಡಿಸಿದೆ.
ಪರಿಸರವಾದಿ ಎಂ ಸಿ ಮೇಹ್ತಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಎನ್ ಜಿಟಿ ಮುಖ್ಯಸ್ಥ ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ನೇತೃತ್ವದ ಪೀಠ, ಉತ್ತರಕಾಶಿವರೆಗೆ ಎಲ್ಲಾ ರೀತಿಯ ಪ್ಲಾಸ್ಟಿಕ್ ತಯಾರಿಕೆ, ಸಂಗ್ರಹ, ಬಳಕೆ ಮತ್ತು ಮಾರಾಟವನ್ನು ನಿಷೇಧಿಸಿದೆ.
ಪ್ಲಾಸ್ಟಿಕ್ ಬಳಕೆಯಿಂದಾಗಿ ಗಂಗಾ ನದಿ ಮಲೀನವಾಗುತ್ತಿದೆ ಎಂಬ ಕಾರಣಕ್ಕೆ ಎನ್ ಜಿಟಿ ಈ ಮಹತ್ವದ ಆದೇಶ ಹೊರಡಿಸಿದೆ.
ಒಂದು ವೇಳೆ ಪ್ಲಾಸ್ಟಿಕ್ ನಿಷೇಧ ಆದೇಶವನ್ನು ಉಲ್ಲಂಘಿಸಿದರೆ 5 ಸಾವಿರ ರುಪಾಯಿ ದಂಡ ವಿಧಿಸಲಾಗುವುದು ಮತ್ತು ಈ ಸಂಬಂಧ ಅಧಿಕಾರಿಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳುವುದಾಗಿ ಎನ್ ಜಿಟಿ ಎಚ್ಚರಿಕೆ ನೀಡಿದೆ.
SCROLL FOR NEXT