ಕೇರಳ: ಇಸಿಸ್ ನೊಡನೆ ಸಂಪರ್ಕ ಹೊಂದಿದ್ದ ಐವರ ವಿರುದ್ಧ ಎನ್ ಐಎ ಯಿಂದ ಪ್ರಕರಣ ದಾಖಲು
ಕೊಚ್ಚಿ: ಇರಾಕ್ ಮತ್ತು ಸಿರಿಯಾ ಇಸ್ಲಾಮಿಕ್ ಸ್ಟೇಟ್ಸ್ (ಇಸಿಸ್) ಸಂಪರ್ಕ ಹೊಂದಿದ್ದಾರೆಂಬ ಶಂಕೆಯ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್ ಐಎ) ಐವರ ವಿರುದ್ದ ಪ್ರಕರಣ ದಾಖಲಿಸಿದೆ. ಕೇರಳದ ಕೇರಳದ ಕಣ್ಣೂರು ಜಿಲ್ಲೆಯ ವಾಲಪಟ್ಟಣಂ ಪೊಲೀಸ್ ಠಾಣೆಯಲ್ಲಿ. ಆರೋಪಿಗಳ ವಿರುದ್ಧ ಎನ್ ಐಎ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯ 38 ಮತ್ತು 39ನೇ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದೆ.
"ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ವಾಲಪಟ್ಟಣಂ ಪೊಲೀಸ್ ಠಾಣೆಯಲ್ಲಿ. ಅಪರಾಧ ಸಂಖ್ಯೆ 1010/2017 ರಂತೆ ನೋಂದಾಯಿಸಲಾಗಿದೆ. ಕಾನೂನು ಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯಿದೆ ಸೆಕ್ಷನ್ 38 ಮತ್ತು 39 ರ ಅಡಿಯಲ್ಲಿ 25.10.2017 ರಂದು ಐವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಇವರು ಇರಾಕ್ ಮತ್ತು ಸಿರಿಯಾದ ಇಸ್ಲಾಮಿಕ್ ಸ್ಟೇಟ್ಸ್ (ಇಸಿಸ್) ಭಯೋತ್ಪಾದಕ ಸಂಘಟನೆಗಳೊಡನೆ ಸಂಬಂಧ ಹೊಂದಿದ್ದಾರೆ" ಎನ್ ಐಎ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.