ದೇಶ

ಸುಖೋಯ್ ಯುದ್ಧ ವಿಮಾನಕ್ಕೆ ಬ್ರಹ್ಮೋಸ್ ಕ್ಷಿಪಣೆ ಜೋಡಣೆ ಕಾರ್ಯ ಪ್ರಾರಂಭ

Raghavendra Adiga
ನವದೆಹಲಿ: ಭಾರತೀಯ ವಾಯು ಪಡೆಯ (ಐಎಎಫ್) ಸುಕೋಯ್-40 ಯುದ್ಧ ವಿಮಾನಕ್ಕೆ ಬ್ರಹ್ಮೋಸ್ ಸೂಪರ್‍ಸಾನಿಕ್ ಕ್ಷಿಪಣಿಯನ್ನು ಅಳವಡಿಸುವ ಕಾರ್ಯ ಆರಂಭವಾಗಿದೆ.
ಹೀಗೆ ವಿಮಾನಕ್ಕೆ ಕ್ಷಿಪಣಿಯನ್ನು ಜೋಡಿಸಿದ ಕಾರಣ ಅತ್ಯಂತ ವೇಗದ ಸೂಪರ್ ಸಾನಿಕ್ ಕ್ಷಿಪಣಿಯನ್ನು ವಿಮಾನದ ಮೂಲಕವೇ ಉಡಾಯಿಸಿ ವೈರಿಗಳ ನೆಲೆಯನ್ನು ಛಿದ್ರಗೊಳಿಸಬಹುದು. ಭಾರತದಲ್ಲಿ ತೋರಿರುವ ಭದ್ರತಾ ಆತಂಕಕಾರಿ ಸನ್ನಿವೇಶದಲ್ಲಿ ಸೇನಾಪಡೆ ತೆಗೆದುಕೊಂಡ ಈ ನಿರ್ಧಾರ ಅತ್ಯಂತ ಮಹತ್ವವನ್ನು ಪಡೆದಿದೆ.
ನವೆಂಬರ್ ತಿಂಗಳಲ್ಲಿ ಸುಕೋಯ್-30 ಯುದ್ಧ ವಿಮಾನದಿಂದ ಬ್ರಹ್ಮೋಸ್ ಕ್ಷಿಪಣಿಯನ್ನು ಪರೀಕ್ಷಾರ್ಥ ಹಾರಾಟ ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ ಭಾರತೀಯ ವಾಯುಪಡೆ ಯಶಸ್ಸು ಕಂಡಿದ್ದು ಇದೀಗ ಸುಕೋಯ್-40 ಜೆಟ್ ಗಳಿಗೆ ಕ್ಷಿಪಣಿ ಜೋಡಿಸುವ ಕಾರ್ಯ ಇದೀಗ ಪ್ರಾರಂಬಗೊಂಡಿದೆ. 2020ರ ವೇಳೆಗೆ ಈ ಕೆಲಸ ಪೂರ್ಣಗೊಳ್ಳುವುದೆಂದು ಸೇನೆಯ ಅಧಿಕೃತ ಮೂಲಗಳು ಮಾಹಿತಿ ನೀಡಿದೆ.
SCROLL FOR NEXT