ದೇಶ

ಉದಯ್ ಪುರದಲ್ಲಿ 9 ಅಡಿ ಪದ್ಮಾವತಿ ಪ್ರತಿಮೆ ಸ್ಥಾಪಿಸಲು ಮುಂದಾದ ರಾಜಸ್ತಾನ ಸರ್ಕಾರ

Lingaraj Badiger
ಜೈಪುರ: ಸಂಜಯ್ ಲೀಲಾ ಭನ್ಸಾಲಿ ನಿರ್ದೇಶದ 'ಪದ್ಮಾವತಿ' ವಿವಾದದ ಬಿಸಿ ಇನ್ನು ತಣ್ಣಗಾಗಿಲ್ಲ. ಇದರ ನಡುವೆಯೇ ರಜಪುತರ ಮತಕ್ಕಾಗಿ ರಾಜಸ್ತಾನ ಸರ್ಕಾರ ಉದಯ್ ಪುರದಲ್ಲಿ ಚಿತ್ತೋರ್ ರಾಣಿ ಪದ್ಮಾವತಿಯ 9 ಅಡಿ ಎತ್ತರದ ಪ್ರತಿ ಸ್ಥಾಪಿಸಲು ಮುಂದಾಗಿದೆ.
ಮೂಲಗಳ ಪ್ರಕಾರ, ರಾಜಸ್ತಾನ ಗೃಹ ಸಚಿವ ಗುಲಾಬ್ ಚಂದ್ ಕಟಾರಿಯಾ ಅವರು ಕಳೆದ ನವೆಂಬರ್ ನಲ್ಲಿ ಪ್ರತಿಮೆ ನಿರ್ಮಾಣಕ್ಕಾಗಿ ಶಿಲ್ಪಿಗಳೊಂದಿಗೆ ಮಾತುಕತೆ ನಡೆಸಿದ್ದು, ಆದಷ್ಟು ಬೇಗ ಕೆಲಸ ಮುಗಿಸುವಂತೆ ಸೂಚನೆ ನೀಡಿದ್ದಾರೆ.
ಜೈಪುರದಲ್ಲಿ ಪದ್ಮಾವತಿ ಪ್ರತಿಮೆ ನಿರ್ಮಾಣವಾಗುತ್ತಿದ್ದು, ಇನ್ನು ಆರು, ಏಳು ತಿಂಗಳಲ್ಲಿ ಉದಯ್ ಪುರದಲ್ಲಿ ಪದ್ಮಾವತಿ ಪ್ರತಿಮೆ ಅನಾವರಣಗೊಳ್ಳಲಿದೆ.
ಇನ್ನು ಡಿಸೆಂಬರ್ 1ರಂದೇ ಬಿಡುಗಡೆಯಾಗಬೇಕಿದ್ದ ಪದ್ಮಾವತಿ ಚಿತ್ರ ಡಿಸೆಂಬರ್ ಅಂತ್ಯಕ್ಕೆ ಬಂದ್ರು ರಿಲೀಸ್ ವಿಚಾರದ ಬಗ್ಗೆ ಸುಳಿವೇ ಇಲ್ಲ. ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯಾಗಲಿ ನಟಿ ದೀಪಿಕಾ ಪಡುಕೋಣೆ ಆಗಲಿ ಇದುವರೆಗೂ ಸಿನಿಮಾ ಬಿಡುಗಡೆ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
SCROLL FOR NEXT