ಲಖನೌ: ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಕಂಡಿರಬಹುದು ಆದರೆ ಅವರು ಸೋಲಿನ ದವಡೆಯಿಂದ ಸ್ವಲ್ಪದರಲ್ಲಿ ಪಾರಾಗಿದ್ದಾರೆ ಎಂದು ಉತ್ತರಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್ ಹೇಳಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಗುಜರಾತ್ ನಲ್ಲಿ ಬಲಿಷ್ಠ ಪಕ್ಷವಾಗಿರುವ ಬಿಜೆಪಿ ಗೆಲುವಿನೊಂದಿಗೆ ತೂಗುವ ಕತ್ತಿಯಿಂದ ಪಾರಾಗಿದ್ದಾರೆ. ಸ್ವಲ್ಪ ಹೆಚ್ಚು ಕಮ್ಮಿಯಾಗಿ ಮತದಾರರ ಆಕ್ರೋಶಕ್ಕೆ ಗುರಿಯಾಗಿದ್ದರೆ ಫಲಿತಾಂಶಗಳೆ ಬೇರೆಯದಾಗಿರುತ್ತಿತ್ತು ಎಂದರು ಹೇಳಿದರು.
ಬಿಜೆಪಿ ಸದಾ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತದೆ. ಆದರೆ ಅವರ ಚುನಾವಣಾ ಪ್ರಚಾರಗಳೆಲ್ಲಾ ಯಾವಾಗಲೂ ಜಾತಿ ಮತ್ತು ಧರ್ಮದ ಪರವಾಗಿ ಇರುತ್ತವೆ. ಈ ಎರಡು ನೆಲೆಗಳಲ್ಲಿ ಮಾತ್ರ ಅವರು ಮತಗಳನ್ನು ಗೆಲ್ಲುತ್ತಾರೆ. ಉತ್ತರ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ಜಾತಿ ಮತ್ತು ಧರ್ಮದ ಮೇಲೆ ಗೆದ್ದಿದ್ದಾರೆ ಹೊರತು ವಿಕಾಸ್(ಅಭಿವೃದ್ಧಿ)ದಿಂದಲ್ಲ ಎಂದು ಬಿಜೆಪಿ ವಿರುದ್ಧ ಅಖಿಲೇಶ್ ವಾಗ್ದಾಳಿ ನಡೆಸಿದ್ದಾರೆ.
ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶ ನಿನ್ನೆ ಹೊರಬಿದ್ದಿದ್ದು 182 ಸ್ಥಾನಗಳ ಪೈಕಿ ಬಿಜೆಪಿ 99 ಸ್ಥಾನಗಳನ್ನು ಪಡೆದು ಸರ್ಕಾರ ರಚನೆ ಮಾಡಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics