ಬೀಜಿಂಗ್: ಈ ವಾರದಲ್ಲಿ ನವದೆಹಲಿಯಲ್ಲಿ ಭಾರತ- ಚೀನಾ ರಾಷ್ಟ್ರೀಯ ಭದ್ರತಾ ಸಲಹೆಗಾರರ ನಡುವೆ ಭಾರತ-ಚೀನಾ ಗಡಿಗೆ ಸಂಬಂಧಿಸಿದಂತೆ ಮಾತುಕತೆ ನಡೆಯಲಿದ್ದು, ಇದಕ್ಕೂ ಮುನ್ನ ಡೋಕ್ಲಾ ಮಾದರಿಯ ಬಿಕ್ಕಟ್ಟು ಎದುರಾಗದಂತೆ ಎಚ್ಚರ ವಹಿಸಲು ನಾವು ಪಾಠ ಕಲಿಯಬೇಕಿದೆ ಎಂದು ಚೀನಾ ಹೇಳಿದೆ.
ಡಿ.22 ರಂದು ಉಭಯ ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ನಡುವಿನ ಮಾತುಕತೆ ನಿಗದಿಯಾಗಿದ್ದು, ಡೋಕ್ಲಾಮ್ ಬಿಕ್ಕಟ್ಟಿನ ನಂತರ ಗಡಿ ವಿಚಾರಕ್ಕಾಗಿಯೇ ನಡೆಯುತ್ತಿರುವ ಮೊದಲ ಸಭೆ ಇದಾಗಿದೆ. "ವಿಶೇಷ ಪ್ರತಿನಿಧಿಗಳ ಈ ಸಭೆ ಗಡಿಗೆ ಸಂಬಂಧಿಸಿದ ಉನ್ನತ ಮಟ್ಟದ ಸಭೆಯಷ್ಟೇ ಅಲ್ಲ ಬದಲಾಗಿ ಕಾರ್ಯತಂತ್ರ ಸಂವಹನ ನಡೆಸುವುದಕ್ಕೂ ಉತ್ತಮ ವೇದಿಕೆಯಾಗಲಿದೆ ಎಂದು ಚೀನಾದ ವಕ್ತಾರರು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಹಾಗೂ ಪ್ರಾದೇಶಿಕವಾಗಿ ಅತ್ಯಂತ ಪ್ರಮುಖವಾಗಿರುವ ಅಂಶಗಳನ್ನು ಈ ಸಭೆಯಲ್ಲಿ ಉಭಯ ಪ್ರತಿನಿಧಿಗಳೂ ಚರ್ಚಿಸಲಿದ್ದಾರೆ ಎಂದು ಚೀನಾದ ವಿದೇಶಾಂಗ ಇಲಾಖೆ ವಕ್ತಾರರು ಹೇಳಿದ್ದಾರೆ.