ದೇಶ

ಅತ್ಯಾಚಾರ ಪ್ರಕರಣ: ಬಾಂಬೆ ಹೈಕೋರ್ಟ್ ನಿಂದ ತರುಣ್ ತೇಜ್ ಪಾಲ್ ಅರ್ಜಿ ವಜಾ

Raghavendra Adiga
ಪಣಜಿ: ಗೋವಾದಲ್ಲಿ ಬಾಂಬೆ ಹೈಕೋರ್ಟ್ ಪೀಠ ಇಂದು ತೆಹಲ್ಕಾ ಮಾಜಿ ಸಂಪಾದಕೀಯ ಮುಖ್ಯಸ್ಥ ತರುಣ್ ತೇಜ್ ಪಾಲ್ ತನ್ನ ವಿರುದ್ಧದ ಅತ್ಯಾಚಾರ ಮತ್ತು ಇತರ ಆರೋಪಗಳನ್ನು ವಜಾಗೊಳಿಸಲು ಕೋರಿ ಸಲ್ಲಿಸಿದ್ದ ಮನವಿಯನ್ನು ತಳ್ಳಿ ಹಾಕಿದೆ.  2013 ರಲ್ಲಿ ಗೋವಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದ  ಆರೋಪ ಹೊತ್ತಿರುವ ತೇಜ್ ಪಾಲ್ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಧೀಶರಾದ ನೂತನ್ ಸರ್ದೇಸಾಯಿ ವಜಾಗೊಳಿಸಿದರು.
"ನಮ್ಮ ಅರ್ಜಿಯನ್ನು ವಜಾಗೊಳಿಸಲಾಗಿರುವ ಆದೇಶದ ವಿವರವಾದ ಪ್ರತಿ ನಮಗಿನ್ನೂ ತಲುಪಿಲ್ಲ. ಹಾಗಾಗಿ ಯಾವ ಹಿನ್ನೆಲೆಯಲ್ಲಿ ಅರ್ಜಿಯನ್ನು ವಜಾಗೊಳಿಸಲಾಯಿತು ಎನ್ನುವುದು ನನಗೆ ತಿಳಿದಿಲ್ಲ. " ಎಂದುತೇಜ್ ಪಾಲ್ ಪರ ವಕೀಲರಾದ ಪ್ರಮೋದ್ ಕುಮಾರ್ ದುಬೆ ಪಿಟಿಐಗೆ ತಿಳಿಸಿದರು. 
ತರುಣ್ ತೇಜ್ ಪಾಲ್ ಮಹಿಳೆಯೊಡನೆ ಅಸಭ್ಯವಾಗಿ ವರ್ತಿಸಿದ್ದ, ಲೈಂಗಿಕವಾಗಿ ಆಕ್ರಮಣ ಮಾಡಿದ್ದ ದೃಶ್ಯಗಳು  ಪಂಚತಾರಾ ಹೋಟೆಲ್ ನ ಲಿಫ್ಟ್ ನ ಹೊರಗಿನ ಸಿಸಿಟಿವಿ ದೃಶ್ಯ ಬಹಿರಂಗವಾಗಿದ್ದವು. 
SCROLL FOR NEXT