ದೇಶ

ಪ್ರಕರಣದಲ್ಲಿ ಎ ರಾಜಾ ಅವರನ್ನು ಬಲಿಪಶುವನ್ನಾಗಿ ಮಾಡಲಾಗಿತ್ತು: ರಾಜಾ ಪರ ವಕೀಲರು

Srinivasamurthy VN
ನವದೆಹಲಿ: ಬಹುಕೋಟಿ 2ಜಿ ತರಂಗಾಂತರ ಪ್ರಕರಣದಲ್ಲಿ ತಮ್ಮ ಕಕ್ಷೀದಾರರಾದ ಎ ರಾಜಾ ಅವರನ್ನು ಬಲಿಪಶುವನ್ನಾಗಿಸಲಾಗಿತ್ತು ಎಂದು ಎ ರಾಜಾ ಪರ ವಕೀಲರು ಹೇಳಿದ್ದಾರೆ.
ಗುರುವಾರ ಬೆಳಗ್ಗೆ ದೆಹಲಿಯ ಪಾಟಿಯಾಲ ಕೋರ್ಟ್ ಆವರಣದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಒಪಿ ಸೈನಿ ಅವರು, 2 ಪ್ರಕರಣದ ಆರೋಪಿಗಳ ವಿರುದ್ಧದ ಸಾಕ್ಷ್ಯಾಧಾರಗಳು ಇಲ್ಲದ ಕಾರಣ ಎ ರಾಜಾ,  ಕನ್ನಿಮೋಳಿ ಸೇರಿದಂತೆ ಪ್ರಕರಣದ ಎಲ್ಲ 17 ಆರೋಪಿಗಳನ್ನು ಖುಲಾಸೆಗೊಳಿಸುತ್ತಿರುವಾದಿಗಿ ಹೇಳಿತ್ತು. ಈ ಆದೇಶದ ಬೆನ್ನಲ್ಲೇ ಕೋರ್ಟ್ ಹೊರವಲಯದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಎ ರಾಜಾ ಪರ ವಕೀಲರು,  ಪ್ರಕರಣದಲ್ಲಿ ಎ ರಾಜಾ ಅವರನ್ನು ಬಲಿಪಶುವನ್ನಾಗಿ ಮಾಡಲಾಗಿತ್ತು ಎಂದು ಹೇಳಿದ್ದಾರೆ.
ಇದೇ ಪ್ರಕರಣ ಸಂಬಂಧ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸ್ವಾನ್ ಟೆಲಿಕಾಂ ಪ್ರಮೋಟರ್ಸ್ ಸಂಸ್ಥೆಪರ ವಕೀಲ ವಿಜಯ್ ಅಗರ್ವಾಲ್, ಶಾಹಿದ್ ಉಸ್ಮಾನ್ ಮತ್ತು ವಿನೋದ್ ಗೊಯೆಂಕಾ ಅವರು, ಆರೋಪಿಗಳ ವಿರುದ್ಧದ  ಆರೋಪಗಳನ್ನು ಸಾಬೀತು ಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ. ಹೀಗಾಗಿ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ ಎಂದು ಹೇಳಿದ್ದಾರೆ.
SCROLL FOR NEXT