ಕನ್ನಿಮೋಳಿ, ಎ ರಾಜಾ 
ದೇಶ

ಸಾಕ್ಷ್ಯಗಳಿಗಾಗಿ ಏಳು ವರ್ಷ ಕಾದಿದ್ದು ವ್ಯರ್ಥವಾಯಿತು: 2ಜಿ ನ್ಯಾಯಾಧೀಶ ಒಪಿ ಸೈನಿ

2ಜಿ ತರಂಗಾಂತರ ಹಂಚಿಕೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಸಿಬಿಐ ವಿಶೇಷ ನ್ಯಾಯಾಲಯ ತನ್ನ ತೀರ್ಪು ನೀಡಿದ್ದು,...

ನವದೆಹಲಿ: 2ಜಿ ತರಂಗಾಂತರ ಹಂಚಿಕೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಸಿಬಿಐ ವಿಶೇಷ ನ್ಯಾಯಾಲಯ ತನ್ನ ತೀರ್ಪು ನೀಡಿದ್ದು, ಸಂಸದೆ ಕನ್ನಿಮೋಳಿ ಹಾಗೂ ಮಾಜಿ ಕೇಂದ್ರ ಸಚಿವ ಎ ರಾಜಾ ಸೇರಿದಂತೆ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದೆ.
2011ರಲ್ಲಿ ನಡೆದ ಬಹುಕೋಟಿ ಹಗರಣದ ಸುದೀರ್ಘ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಧೀಶ ಒ ಪಿ ಸೈನಿ ಅವರು, ಕಳೆದ ಏಳು ವರ್ಷಗಳಿಂದ ಹಗರಣದ ಸಾಕ್ಷ್ಯಗಳಿಗಾಗಿ ಕಾದಿದ್ದು ವ್ಯರ್ಥವಾಯಿತು. ಈ ಪ್ರಕರಣ ಕೇವಲ ವದಂತಿ, ಗಾಸಿಪ್ ಮತ್ತು ಊಹಾಪೋಗಳನ್ನು ಆಧರಿಸಿದೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ ಐದು ವರ್ಷಗಳಿಂದ ಹಗರಣಕ್ಕೆ ಸಂಬಂಧಿಸಿದಂತೆ ಯಾರಾದರೂ ಬಲವಾದ ಸಾಕ್ಷ್ಯಗಳನ್ನು ನೀಡುತ್ತಾರೆ ಎಂಬ ನಿರೀಕ್ಷೆಯಿಂದ ಬೇಸಿಗೆ ರಜೆ ಸೇರಿದಂತೆ ಎಲ್ಲಾ ಸರ್ಕಾರಿ ಕೆಲಸಗಳ ದಿನದಂದು ಬೆಳಗ್ಗೆ 10ಗಂಟೆಯಿಂದ ಸಂಜೆ 5 ಗಂಟೆಯವರೆಗೆ ತೆರೆದ ಕೋರ್ಟ್ ಹಾಲ್ ನಲ್ಲಿ ಕುಳಿತಿದ್ದೆ. ಆದರೆ ಅದೆಲ್ಲವೂ ವರ್ಥವಾಯಿತು ಎಂದು ನ್ಯಾಯಾಧೀಶರು ತಮ್ಮ 1,552 ಪುಟಗಳ ತೀರ್ಪಿನಲ್ಲಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಒಬ್ಬ ಒಬ್ಬ ವ್ಯಕ್ತಿಯೂ ಸರಿದಾಯ ಸಾಕ್ಷ್ಯ ಒದಗಿಸಲಿಲ್ಲ. ಎಲ್ಲರೂ ವದಂತಿ, ಗಾಸಿಪ್ ಮತ್ತು ಊಹಾಪೋಹಗಳಿಂದ ಸೃಷ್ಟಿಸಲ್ಪಟ್ಟ ಸಾರ್ವಜನಿಕ ಗ್ರಹಿಕೆಯನ್ನು ಬಲವಾಗಿ ನಂಬಿದ್ದರು. ಆದರೆ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಸಾರ್ವಜನಿಕ ಗ್ರಹಿಕೆಗೆ ಯಾವುದೇ ಸ್ಥಾನವಿಲ್ಲ ಎಂದು ಸೈನಿ ಹೇಳಿದ್ದಾರೆ.
2ಜಿ ಸ್ಪೆಕ್ಟ್ರಮ್ ಹಗರಣದ ವಿಚಾರಣೆ ಸಾರ್ವಜನಿಕರ ಗಮನ ಸೆಳೆದಿತ್ತು. ಈ ಪ್ರರಕರಣದ ತೀರ್ಪಿನ ಬಗ್ಗೆ ಎಲ್ಲರಿಗೂ ಕುತೂಹಲ ಮೂಡಿಸಿತ್ತು ಎಂದಿದ್ದಾರೆ.
ಪ್ರಮುಖ ಆರೋಪಿಗಳಾಗಿದ್ದ ಕರುಣಾನಿಧಿ ಪುತ್ರಿ ಕನ್ನಿಮೋಳಿ, ಸಂಬಂಧಿ ಎ ರಾಜಾ ಅವರನ್ನೂ ಸೇರಿದಂತೆ ಸಿಬಿಐ ವಿಶೇಷ ನ್ಯಾಯಾಲಯ ಎಲ್ಲ ಆರೋಪಿಗಳನ್ನು ನಿರಪರಾಧಿಗಳೆಂದು ಖುಲಾಸೆಗೊಳಿಸಿದೆ. ಅಲ್ಲದೆ ತನಿಖಾ ಸಂಸ್ಥೆ ಆದೇಶ ಪ್ರಶ್ನಿಸಿ ಹೈಕೋರ್ಟ್ ಗೆ ಮೇಲ್ಮನವಿ  ಅರ್ಜಿ ಸಲ್ಲಿಸಿದರೆ ಎಲ್ಲ ಆರೋಪಿಗಳು 5 ಲಕ್ಷ ಭದ್ರತಾ ಠೇವಣಿ ಇಡುವಂತೆಯೂ ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.
ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಬಹುಕೋಟಿ ರು. 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಡಿಎಂಕೆ ಮುಖಂಡ, ಮಾಜಿ ಟೆಲಿಕಾಂ ಸಚಿವ ಎ.ರಾಜಾ ಹಾಗೂ ಕರುಣಾನಿಧಿ ಪುತ್ರಿ ಕನ್ನಿಮೋಳಿ ಸಹಿತ 17 ಮಂದಿ ಪ್ರಮುಖ ಆರೋಪಿಗಳು  ಎಂದು ಈ ಹಿಂದೆ ಸಿಬಿಐ ಅಧಿಕಾರಿಗಳು ಚಾರ್ಜ್ ಶೀಟ್ ದಾಖಲಿದ್ದರು. ಅಲ್ಲದೆ ಸತತ 6 ವರ್ಷಗಳ ಈ ಪ್ರಕರಣ ಸಂಬಂಧ ಸಿಬಿಐ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಿತ್ತು. 
ಜಾರಿ ನಿರ್ದೇಶನಾಲಯ, ಸಿಬಿಐ ಆರೋಪಗಳನ್ನು ತಳ್ಳಿ ಹಾಕಿದ ನ್ಯಾಯಧೀಶ ಒ.ಪಿ.ಸೈನಿ ಅವರು ಎಲ್ಲ ಆರೋಪಿಗಳನ್ನು ದೋಷಮುಕ್ತಗೊಳಿಸಿ ಆದೇಶ ನೀಡಿದ್ದಾರೆ. ನಿಯಮ ಉಲ್ಲಂಘಿಸಿ 2ಜಿ ಹಂಚಿಕೆಯಿಂದ  30,000ಕೋ.ರೂ. ನಷ್ಟವಾಗಿದೆ ಎಂದು ಆರೋಪಿಸಲಾಗಿತ್ತು. ಹಗರಣ ಸಂಬಂಧ ನ್ಯಾಯಾಲಯ ಮೂರು ಪ್ರಕರಣಗಳನ್ನು ವಿಚಾರಣೆ ನಡೆಸಿತ್ತು. ಒಂದು ಪ್ರಕರಣ ಜಾರಿ ನಿರ್ದೇಶನಾಲಯ, ಇನ್ನೆರಡು ಪ್ರಕರಣಗಳನ್ನು ಸಿಬಿಐ ತನಿಖೆ ನಡೆಸಿ ತನ್ನ ವರದಿ ಸಲ್ಲಿಸಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

SCROLL FOR NEXT