ದೇಶ

ತಂಬಾಕು ಉತ್ಪನ್ನಗಳ ಮೇಲೆ ಎಚ್ಚರಿಕೆ ಸಂದೇಶ: ಕರ್ನಾಟಕ ಹೈ ಕೋರ್ಟ್ ತೀರ್ಪಿಗೆ ತಡೆ ನೀಡಲು ಸುಪ್ರೀಂ ನಕಾರ

Raghavendra Adiga
ನವದೆಹಲಿ: ತಂಬಾಕು ಉತ್ಪನ್ನಗಳ ಪ್ಯಾಕೆಟ್ ಗಳ ಮೇಲೆ ಶೇ.85 ರಷ್ಟು ಭಾಗ ಎಚ್ಚರಿಕೆ ಸಂದೇಶ ಇರುವ ಚಿತ್ರವನ್ನು ಹಾಕುವ ಅಗತ್ಯವಿಲ್ಲ ಎನ್ನುವ ಕರ್ನಾಟಕ ಹೈಕೋರ್ಟ್  ಆದೇಶಕ್ಕೆ ಯಾವುದೇ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರನ್ನೊಳಗೊಂಡ ಪೀಠವು ಹೈ ಕೋರ್ಟ್ ಗೆ ತನ್ನ ವೆಬ್ ಸೈಟ್ ನಲ್ಲಿ ತೀರ್ಪು ಪ್ರಕಟಿಸುವಂತೆ ಆದೇಶಿಸ್ದ್ದು ಮುಂದಿನ ವರ್ಷ ಜನವರಿ 8 ರಂದು ಮುಂದಿನ ವಿಚಾರಣೆಯನ್ನು ನಡೆಸುವುದಾಗಿ ಹೇಳಿದೆ. ಹೆಲ್ತ್ ಆಫ್ ಮಿಲಿಯನ್ ಟ್ರಸ್ಟ್ ಎನ್ ಜಿಓ ಸೇರಿ ಹಲವಾರು ಸಂಘಟನೆಗಳು ಕೋರ್ಟ್ ತೀರ್ಪನ್ನು ಪ್ರಶ್ನಿಸಿದ್ದವು.
ದೇಶದ ವಿವಿಧ ಸಿಗರೇಟ್ ಉತ್ಪಾದನಾ ಕಂಪನಿಗಳು ಕೇಂದ್ರ ಸರ್ಕಾರದಾದೇಶವನ್ನು ಪ್ರಶ್ನಿಸಿ ತಮ್ಮ ರಾಜ್ಯಗಳಲ್ಲಿನ ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದವು. ಸುಮಾರು ಐವತ್ತಕ್ಕೂ ಹೆಚ್ಚು ಅರ್ಜಿಗಳು ಬಂದ ಕಾರಣ  ಸುಪ್ರೀಂಕೋರ್ಟ್ ಈ ಎಲ್ಲಾ ತಕರಾರು ಅರ್ಜಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಗೆ ವಹಿಸಿತ್ತು. ಅದೇ ವಿಚಾರವಾಗಿ ಕರ್ನಾಟಕ ಹೈ ಕೋರ್ಟ್ ಡಿ.15ರಂದು ಕೇಂದ್ರ ಸರ್ಕಾರದ 2014ರ ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ತಿದ್ದುಪಡಿ ಅಧಿನಿಯಮವನ್ನು ರದ್ದುಗೊಳಿಸಿ ಆದೇಶ ನೀಡಿತ್ತು
SCROLL FOR NEXT