ಸಾಂದರ್ಭಿಕ ಚಿತ್ರ 
ದೇಶ

ಉತ್ತರಾಖಂಡ: ಹರಿದ್ವಾರ ಜೈಲಿನಲ್ಲಿ ಏಡ್ಸ್'ನಿಂದ ಬಳಲುತ್ತಿರುವ 16 ಕೈದಿಗಳು

ಉತ್ತರಾಖಂಡ ರಾಜ್ಯದ ಹರಿದ್ವಾರದಲ್ಲಿರುವ ಜೈಲಿನಲ್ಲಿ 16 ಕೈದಿಗಳು ಏಡ್ಸ್ ರೋಗದಿಂದ ಬಳಲುತ್ತಿದ್ದಾರೆಂದು ವರದಿಗಳು ತಿಳಿಸಿವೆ...

ಹರಿದ್ವಾರ: ಉತ್ತರಾಖಂಡ ರಾಜ್ಯದ ಹರಿದ್ವಾರದಲ್ಲಿರುವ ಜೈಲಿನಲ್ಲಿ 16 ಕೈದಿಗಳು ಏಡ್ಸ್ ರೋಗದಿಂದ ಬಳಲುತ್ತಿದ್ದಾರೆಂದು ವರದಿಗಳು ತಿಳಿಸಿವೆ. 
ಉತ್ತರಖಾಂಡ ರಾಜ್ಯ ಏಡ್ಸ್ ನಿಯಂತ್ರಣ ಸಮಾಜ ಕೆಲ ದಿನಗಳಿಂದ ಜೈಲುಗಳಿಗೆ ಭೇಟಿ ನೀಡಿ ಕೈದಿಗಳ ಪರಿಶೀಲನೆ ನಡೆಸುತ್ತಿದೆ. ಪರೀಕ್ಷೆ ವೇಳೆ ಹರಿದ್ವಾರದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಒಟ್ಟು 16 ಕೈದಿಗಳು ಏಡ್ಸ್ ನಿಂದ ಬಳಲುತ್ತಿರುದು ಬೆಳಕಿಗೆ ಬಂದಿದೆ. 
ಏಡ್ಸ್ ರೋಗದಿಂದ ಬಳಲುತ್ತಿರುವ ಎಲ್ಲಾ 16 ಕೈದಿಗಳು ಯುವಕರೇ ಆಗಿದ್ದಾರೆಂದು ಹೇಳಲಾಗುತ್ತಿದೆ. 
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಮ್ಯಾಜಿಸ್ಟ್ರೇಟ್ ದೀಪಕ್ ರಾವತ್ ಅವರು, ಏಡ್ಸ್ ರೋಗಕ್ಕೆ ತುತ್ತಾಗಿರುವ ಎಲ್ಲಾ ಕೈದಿಗಳಿಗೂ ಕೂಡಲೇ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. 
ಜೈಲಿನಲ್ಲಿರುವ ಪುರುಷ ಕೈದಿಗಳಲ್ಲಿ ರೋಗ ಕಂಡುಬಂದಿದ್ದು, ಆದರೆ, ರೋಗ ಇತರೆ ಕೈದಿಗಳಿಗೆ ಹೇಗೆ ಹರಡಿತು ಎಂಬುದಕ್ಕೆ ಉತ್ತರ ನೀಡಲು ಜೈಲಿನ ಅಧಿಕಾರಿಗಳು ನಿರಾಕರಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದಾವಣಗೆರೆಯಲ್ಲಿ ಕಾಂಗ್ರೆಸ್ ಬೆನ್ನಿಗೆ ಚೂರಿ: ಸುರ್ಜೇವಾಲ ಕೈಸೇರಿದ ರಿಪೋರ್ಟ್; MLC ಅಬ್ದುಲ್ ಜಬ್ಬಾರ್ ರಾಜಿನಾಮೆ!

ಹುಬ್ಬಳ್ಳಿ ಆಯ್ತು ಈಗ ಕೊಪ್ಪಳದಲ್ಲೂ Love Jihad: ಮುಸ್ತಫಾ ಮೊಬೈಲ್‌ನಲ್ಲಿ Hindu ಯುವತಿಯರ ಅಶ್ಲೀಲ ವಿಡಿಯೋಗಳು ಪತ್ತೆ!

ಮತ್ತೊಂದು ಗುಡ್ ನ್ಯೂಸ್: ಕದನ ವಿರಾಮದ ನಂತರ ಹಾರ್ಮುಜ್ ದಾಟಿದ ಎಲ್‌ಪಿಜಿ ಹೊತ್ತ ಭಾರತದ ಹಡಗು

ದಾವಣಗೆರೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ: ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ತಲೆದಂಡ, ಜಮೀರ್ ಸಚಿವ ಸ್ಥಾನಕ್ಕೂ ಕುತ್ತು?

5 ವರ್ಷದ ಬಾಲಕನ ಜೊತೆ ಅಸ್ವಾಭಾವಿಕ s*x; ವಸತಿ ಶಾಲೆ ವಿದ್ಯಾರ್ಥಿಯ ಗಂಟಲು ಸೀಳಿದ ಗಾರ್ಡ್!

SCROLL FOR NEXT