ನಯನತಾರಾ 
ದೇಶ

ನಟಿ ನಯನತಾರಾ ಫೋಟೋ ನೋಡಿ ಪೊಲೀಸರ ಬಲೆಗೆ ಬಿದ್ದ ಮೊಬೈಲ್ ಕಳ್ಳ!

ಮೊಬೈಲ್ ಕಳ್ಳನನ್ನು ಬಂಧಿಸಲು ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಅವರ ಫೋಟೋವನ್ನು ಬಳಸಿದ್ದ ಬಿಹಾರದ ಮಹಿಳಾ ಪೊಲೀಸ್ ಮಧುಬಾಲ ದೇವಿ ಇದೀಗ...

ಬಿಹಾರ: ಮೊಬೈಲ್ ಕಳ್ಳನನ್ನು ಬಂಧಿಸಲು ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಅವರ ಫೋಟೋವನ್ನು ಬಳಸಿದ್ದ ಬಿಹಾರದ ಮಹಿಳಾ ಪೊಲೀಸ್ ಮಧುಬಾಲ ದೇವಿ ಇದೀಗ ಸುದ್ದಿಯಾಗಿದ್ದಾರೆ. 
ಬಿಹಾರದ ದರಭಂಗ್ ಜಿಲ್ಲೆಯಲ್ಲಿ ಅಸಿಸ್ಟೆಟ್ ಸಬ್ ಇನ್ಸ್ ಪೆಕ್ಟರ್ ಮಧುಬಾಲಾ ದೇವಿ ನಯನತಾರಾ ಅವರಂತೆ ಪೋಸ್ ಕೊಟ್ಟು ಖದೀಮನನ್ನು ಹಿಡಿದು ಚಾಣಾಕ್ಷತೆ ಮೆರೆದಿದ್ದಾರೆ. ಬಿಜೆಪಿ ನಾಯಕ ಸಂಜಯ್ ಮಹಾಟೋ ಎಂಬುವರ ದುಬಾರಿ ಮೌಲ್ಯದ ಮೊಬೈಲ್ ಅನ್ನು ಮೊಹಮ್ಮದ್ ಹಸ್ ನೈನ್ ಎಂಬಾತ ಕದ್ದಿದ್ದ. ಈ ಬಗ್ಗೆ ಬಿಜೆಪಿ ನಾಯಕ ದೂರು ದಾಖಲಿಸಿದ್ದರು. 
ಕಳುವಾಗಿದ್ದ ಮೊಬೈಲ್ ಕಾಲ್ ಡಿಟೇಲ್ಸ್ ದಾಖಲೆಗಳನ್ನು ಪರಿಶೀಲಿಸಿದಾಗ ಮೊಬೈಲ್ ಕಳ್ಳ ಅದೇ ಮೊಬೈಲ್ ಹ್ಯಾಂಡ್ ಸೆಟ್ ಬಳಸುತ್ತಿರುವುದಾಗಿ ಗೊತ್ತಾಗಿದೆ. ನಂತರ ಪೊಲೀಸರು ಆತನನ್ನು ಹಲವು ಬಾರಿ ಬಂಧಿಸಲು ಮುಂದಾದಾಗ ಆತ ತಪ್ಪಿಸಿಕೊಂಡು ಪರಾರಿಯಾಗಿದ್ದ. 
ಇದಕ್ಕಾಗಿ ಮಧುಬಾಲ ಅವರು ಪ್ರೀತಿಯ ನಾಟಕವಾಡಿದ್ದರು. ಮೊದಲಿಗೆ ಆಸಕ್ತಿ ತೋರದ ಕಳ್ಳ ನಂತರ ನಿಮ್ಮ ಫೋಟೋ ಕಳುಹಿಸಿ ಎಂದು ಕೇಳಿದ್ದಾನೆ. ಆಗ ಮಧುಬಾಲ ಅವರು ನಯನತಾರ ಅವರ ಫೋಟೋವನ್ನು ಕಳುಹಿಸಿದ್ದಾರೆ. ನಯನತಾರ ಫೋಟೋವನ್ನು ಕಂಡ ಕಳ್ಳ ಕೂಡಲೇ ಭೇಟಿಯಾಗುವುದಾಗಿ ಒಪ್ಪಿಕೊಂಡಿದ್ದಾನೆ. ನಂತರ ಸೂಕ್ತ ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. 
ಅಂತು ಖ್ಯಾತ ನಟಿಯೊಬ್ಬರ ಫೋಟೋ ಕಳ್ಳನ ಬಂಧನಕ್ಕೆ ಕಾರಣವಾಗಿರುವುದು ವಿಪರ್ಯಾಸವೇ ಸರಿ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್