ದೇಶ

ಪದ್ಮಾವತಿಗೆ ವಿವಾದ: ಸಿಬಿಎಫ್'ಸಿ ಸಮಿತಿಯೊಂದಿಗೆ ಕೈಜೋಡಿಸಲು ರಾಜಮನೆತನಕ್ಕೆ ಆಹ್ವಾನ

Manjula VN
ಜೈಪುರ: ವಿವಾದಿತ ಪದ್ಮಾವತಿ ಚಲನಚಿತ್ರಕ್ಕೆ ಪ್ರಮಾಣಪತ್ರ ನೀಡುವ ನೆರವಾಗಲು ರಚನೆ ಮಾಡಲಾಗಿರುವ ಸಮಿತಿಯೊಂದಿಗೆ ಕೈಜೋಡಿಸುವಂತೆ ಸಿಬಿಎಫ್'ಸಿ ನನಗೆ ಆಹ್ವಾನ ನೀಡಿದೆ ಎಂದು ಮೇವಾಡ್ ರಾಜಮನೆತನಕ್ಕೆ ಸೇರಿದ ವಿಶ್ವರಾಜ್ ಸಿಂಗ್ ಅವರು ಶನಿವಾರ ಹೇಳಿದ್ದಾರೆ. 
ಈ ಕುರಿತಂತೆ ಮಾತನಾಡಿರುವ ಅವರು, ಸಿಬಿಎಫ್'ಸಿ ಮುಖ್ಯಸ್ಥರಾಗಿರುವ ಪ್ರಸೂನ್ ಜೋಷಿಯವರು ಕರೆ ಮಾಡಿ ಸಮಿತಿಯೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿಕೊಂಡಿದ್ದರು ಎಂದು ಹೇಳಿದ್ದಾರೆ. 
ಮನವಿ ಹಿನ್ನಲೆಯಲ್ಲಿ ಸಿಬಿಎಫ್'ಸಿ ಅಧ್ಯಕ್ಷರಿಗೆ ಪತ್ರ ಬರೆದಿದ್ದು, ಚಿತ್ರ ಕುರಿತಂತೆ 7 ಪ್ರಮುಖ ಅಂಶಗಳನ್ನು ತಿಳಿಸುವಂತೆ ತಿಳಿಸಿದ್ದೇನೆ. ಸಮಿತಿ ಹೇಗೆ ಕೆಲಸ ಮಾಡುತ್ತದೆ? ಅದರ ಸ್ವರೂಪವೇನು? ಸಮಿತಿಯ ಶಿಫಾರಸುಗಳು ಕೇಲವ ಸಲಹೆಯೋ ಅಥವಾ ನಿರ್ದೇಶನಗಳಾಗಿರುತ್ತವೆಯೇ? ಎಂಬ ವಿಚಾರಗಳ ವಿವರಣೆ ಕೇಳಿದ್ದೇನೆ. ಈ ಬಗ್ಗೆ ಸಿಬಿಎಫ್'ಸಿ ಪ್ರತಿಕ್ರಿಯೆ ನೀಡಿದ ಬಳಿಕವಷ್ಟೇ ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆಂದು ತಿಳಿಸಿದ್ದಾರೆ. 
ನನ್ನ ಕುಟುಂಬದ ಗೌರವಾನ್ವಿತ ಪೂರ್ವಜರ ಹೆಸರು ಹಾಗೂ ಇತಿಹಾಸವನ್ನು ಚಿತ್ರದಲ್ಲಿ ಬಳಕೆ ಮಾಡಲಾಗಿದೆ. ಕೇವಲ ಕಥೆಯಷ್ಟೇಯಲ್ಲ ಪಾತ್ರಗಳ ಚಿತ್ರಣ ಕೂಡ ಮಹತ್ವದ್ದಾಗಿರುತ್ತದೆ. ಚಿತ್ರದ ಹಾಡೂ ಹಾಗೂ ಪ್ರೋಮೋಗಳನ್ನು ನೋಡಿದ ಬಳಿಕ ಚಿತ್ರದ ನಿರ್ಮಾಣಕಾರರು ಈ ಹಿಂದೆ ನೀಡಿದ್ದ ಹೇಳಿಕೆಗಳು ಟೊಳ್ಳು ಎಂಬುದನ್ನು ತೋರಿಸುತ್ತವೆ. 
ಚಿತ್ರ ನಿರ್ಮಾಣ ಮಾಡಲು ನಮ್ಮ ಕುಟುಂಬ ಅನುಮತಿಯನ್ನು ನೀಡಿರಲಿಲ್ಲ. ಈ ರೀತಿಯ ಚಿತ್ರವೊಂದು ನಿರ್ಮಾಣವಾಗುತ್ತಿದೆ ಎಂದು ನಮಗೆ ಮಾಹಿತಿಯನ್ನೇ ನೀಡಿರಲಿಲ್ಲ ಎಂದು ತಿಳಿಸಿದ್ದಾರೆ. 
SCROLL FOR NEXT