ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಕುಖ್ಯಾತ ಕ್ರಿಮಿನಲ್ ಸೋನು ಪಂಜಾಬನ್ ಬಂಧನ

ಹದಿ ಹರೆಯದ ಹುಡುಗಿಯರನ್ನು ಅಪಹರಿಸಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಕುಖ್ಯಾತ ಕ್ರಿಮಿನಲ್ ಗೀತಾ ಆರೋರ ಅಲಿಯಾಸ್ ಸೋನು ಪಂಜಾಬನ್...

ಸೋನು ಪಂಜಾಬನ್
Vishwanath S
Updated On : 25 Dec 2017, 6:01 am
ನವದೆಹಲಿ: ಹದಿ ಹರೆಯದ ಹುಡುಗಿಯರನ್ನು ಅಪಹರಿಸಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಕುಖ್ಯಾತ ಕ್ರಿಮಿನಲ್ ಗೀತಾ ಆರೋರ ಅಲಿಯಾಸ್ ಸೋನು ಪಂಜಾಬನ್ ಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. 
ಆರು ತಿಂಗಳ ಕಾಲ ಬೆನ್ನಟ್ಟಿದ್ದ ದೆಹಲಿ ಪೊಲೀಸರು ಕೊನೆಗೂ ಸೋನು ಪಂಜಾಬನ್ ಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಶನಿವಾರವೇ ಆಕೆಯನ್ನು ಬಂಧಿಸಿದ್ದು ಎಸಿಪಿ ಸಂದೀಪ್ ಲಾಂಬಾ ನೇತೃತ್ವದ ತಂಡ ಕ್ರೈಂ ಬ್ರಾಂಚ್ ಸೈಬರ್ ಸೆಲ್ ಕಚೇರಿಯಲ್ಲಿ ಪ್ರಶ್ನಿಸುತ್ತಿದೆ. 
16ರ ಹರೆಯದ ಬಲವಂತದ ವೇಶ್ಯೆಗಾರಿಕೆಯ ಸಂತ್ರಸ್ತ ಯುವತಿಯೊಬ್ಬಳು ಕೊಟ್ಟ ಮಾಹಿತಿಯನ್ನು ಅನುಸರಿಸಿ ನೋನು ಪಂಜಾಬನ್ ಳ ರಹಸ್ಯ ಅಡಗುದಾಣವನ್ನು ಪತ್ತೆ ಹಚ್ಚಿ ಆಕೆಯನ್ನು ಸೆರೆ ಹಿಡಿಯಲಾಗಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

Advertisement

Advertisement

ಮೊದಲಿಗೆ ಸಂತ್ರಸ್ತ ಯುವತಿ ಕೊಟ್ಟ ದೂರಿಗೆ ಪೊಲೀಸರು ಯಾವುದೇ ರೀತಿಯ ಕ್ರಮ ಕೈಗೊಳ್ಳದ ಕಾರಣ ತನ್ನನ್ನು ಕೊಲ್ಲಬಹುದು ಎಂಬ ಭೀತಿಯಲ್ಲಿ ಯುವತಿಯೂ ಭೂಗತಳಾಗಿದ್ದಳು. ಈ ಪ್ರಕರಣವನ್ನು ಕೈಗೆತ್ತಿಕೊಂಡ ಎಸಿಪಿ ಲಾಂಬಾ ಅವರು ಕಳೆದ ನವೆಂಬರ್ ತಿಂಗಳಲ್ಲಿ ಸಂತ್ರಸ್ತ ಯುವತಿಯನ್ನು ಪತ್ತೆ ಹಚ್ಚಿ ಆಕೆಯಿಂದ ಹಲವು ರಹಸ್ಯ ಮಾಹಿತಿಗಳನ್ನು ಪಡೆದುಕೊಂಡು ನಂತರ ಕಾರ್ಯಾಚರಣೆ ನಡೆಸಿದ್ದರು. 
2009ರಲ್ಲಿ ಸಂತ್ರಸ್ತ ಯುವತಿ 12 ವರ್ಷದವಳಾಗಿದ್ದಾಗ ಆಕೆಯನ್ನು ಅಪಹರಿಸಿ ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಲಾಗಿತ್ತು. ನಂತರ ಆಕೆ 2014ರಲ್ಲಿ ತಪ್ಪಿಸಿಕೊಂಡು ಬಂದು ನಜಫ್ಗಡ ಪೊಲೀಸ್ ಠಾಣೆಯಲ್ಲಿ ಸೋನು ಪಂಜಾಬನ್ ಹಾಗೂ ಆಕೆಯ ದಲ್ಲಾಳಿಗಳ ವಿರುದ್ಧ ದೂರು ನೀಡಿದ್ದಳು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments