ಸಾಂದರ್ಭಿಕ ಚಿತ್ರ 
ದೇಶ

ಅಲ್ ಖೈದಾದಿಂದ ಬೆಂಗಳೂರು, ಮುಂಬೈ, ದೆಹಲಿಯಲ್ಲಿ ಉಗ್ರ ದಾಳಿಯ ಬೆದರಿಕೆ

ಕಾಶ್ಮೀರ ಗೆಲುವಿಗಾಗಿ ಬೆಂಗಳೂರು, ಮುಂಬೈ, ದೆಹಲಿ ಹಾಗೂ ಕೊಲ್ಕತಾದಲ್ಲಿ ಉಗ್ರ ದಾಳಿ ನಡೆಸುವುದಾಗಿ ಜಾಗತಿಕ ಉಗ್ರ...

ನವದೆಹಲಿ: ಕಾಶ್ಮೀರ ಗೆಲುವಿಗಾಗಿ ಬೆಂಗಳೂರು, ಮುಂಬೈ, ದೆಹಲಿ ಹಾಗೂ ಕೊಲ್ಕತಾದಲ್ಲಿ ಉಗ್ರ ದಾಳಿ ನಡೆಸುವುದಾಗಿ ಜಾಗತಿಕ ಉಗ್ರ ಸಂಘಟನೆ ಅಲ್ ಖೈದಾ ಬುಧವಾರ ಬೆದರಿಕೆ ಹಾಕಿದೆ.
ಇಂದು ಉಗ್ರ ಸಂಘಟನೆ ಹೊಸ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಭಾರತೀಯ ಮೆಟ್ರೋ ನಗರಗಳನ್ನು ಗುರಿಯಾಗಿಸಿಕೊಂಡಿರುವ ಆಘಾತಕಾರಿ ವಿಚಾರಗಳನ್ನು ತಿಳಿಸಿದೆ.
ಕಾಶ್ಮೀರ ವಿವಾದಕ್ಕೆ ಸುಲಭ ಪರಿಹಾರ ಇಲ್ಲ. ಅದಕ್ಕೆ ಮುಸ್ಲಿಮರ ರಕ್ತ ಮತ್ತು ಬೆವರಿನ ಅಗತ್ಯ ಇದೆ. ಆದರೆ ಭಾರತ ಕಾಶ್ಮೀರದಂತಹ ಒಂದು ಸಣ್ಣ ಸ್ಥಳದಲ್ಲಿ 6 ಲಕ್ಷ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದೆ. ಹೀಗಾಗಿ ನಾವು ಬೆಂಗಳೂರು, ಕೋಲ್ಕತಾ ಹಾಗೂ ದೆಹಲಿಯಲ್ಲಿ ದಾಳಿ ಮಾಡುವ ಮೂಲಕ ಕಾಶ್ಮೀರ ಭದ್ರತೆಯನ್ನು ದುರ್ಬಲಗೊಳಿಸಬೇಕು ಎಂದು ಅಲ್ ಖೈದಾ ವಕ್ತಾರ ಒಸಾಮಾ ಮಹಮ್ಮದ್ ವಿಡಿಯೋದಲ್ಲಿ ಹೇಳಿದ್ದಾನೆ.
ಭಾರತದ ಇತರೆ ನಗರಳಲ್ಲಿ ದಾಳಿ ನಡೆದಾಗ ಅಲ್ಲಿ ಭದ್ರತೆಯನ್ನು ಹೆಚ್ಚಿಸಲಾಗುತ್ತದೆ. ಆಗ ಕಾಶ್ಮೀರದಲ್ಲಿ ಭದ್ರತೆ ದುರ್ಬಲವಾಗುತ್ತದೆ. ಇದೇ ಅವಕಾಶ ಬಳಸಿಕೊಂಡು ಕಾಶ್ಮೀರ ವಶಕ್ಕೆ ಪಡೆದುಕೊಳ್ಳಬಹುದು ಎಂದು ವಿಡಿಯೋದಲ್ಲಿ ಹೇಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ CWRC ಮತ್ತೆ ಶಾಕ್: ತಮಿಳುನಾಡಿಗೆ ನಿತ್ಯ 3,000 ಕ್ಯೂಸೆಕ್ ನೀರು ಹರಿಸಲು ಸೂಚನೆ

ಬೆಂಗಳೂರಿನಿಂದ ಸಾಗರಕ್ಕೆ ಬರುತ್ತಿದ್ದ ಬಸ್‌ಗೆ ಬೆಂಕಿ; ಚಾಲಕ-ಕ್ಲೀನರ್ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಸೇಫ್, Video

'ವಿರಾಟ್ ಕೊಹ್ಲಿ ಬೇಗ ಔಟಾದರೆ ನನಗೆ ಊಟವೇ ಸೇರಲ್ಲ': ಸ್ಟಾರ್ ಬ್ಯಾಟರ್ ಬಗ್ಗೆ ನಾನಾ ಪಾಟೇಕರ್ ಹೇಳಿಕೆಯ ಹಳೆಯ ವಿಡಿಯೋ ವೈರಲ್