ಬಂಧನ 
ದೇಶ

15 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸರಿಗೆ ವಾಷಿಂಗ್ ಮಷೀನ್‍ನಲ್ಲಿ ಸಿಕ್ಕಿಬಿದ್ದ!

15 ವರ್ಷಗಳ ಹಿಂದೆ ಒಂದು ಲಕ್ಷ ರುಪಾಯಿ ವಂಚನೆಯ ಪ್ರಕರಣದಲ್ಲಿ ಬಂಧಿತನಾಗಿ ನಂತರ ತಪ್ಪಿಸಿಕೊಂಡಿದ್ದ ಆರೋಪಿಯೊಬ್ಬನನ್ನು ಪೊಲೀಸರು ಮತ್ತೆ...

ಮುಂಬೈ: 15 ವರ್ಷಗಳ ಹಿಂದೆ ಒಂದು ಲಕ್ಷ ರುಪಾಯಿ ವಂಚನೆಯ ಪ್ರಕರಣದಲ್ಲಿ ಬಂಧಿತನಾಗಿ ನಂತರ ತಪ್ಪಿಸಿಕೊಂಡಿದ್ದ ಆರೋಪಿಯೊಬ್ಬನನ್ನು ಪೊಲೀಸರು ಮತ್ತೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 
54 ವರ್ಷಗಳ ಆರೋಪಿಯನ್ನು ಮುಂಬೈನ ಜುಹೂ ನಗರದಲ್ಲಿನ ಆತನ ಮನೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಾಗಿ ಪೊಲೀಸರು ಆತನ ಮನೆಯನ್ನು ಶೋಧ ನಡೆಸುತ್ತಿದ್ದಾಗ ಆತ ವಾಷಿಂಗ್ ಮಷೀನ್ ನಲ್ಲಿ ಅವಿತು ಕುಳಿತಿದ್ದ ಎಂದು ತಿಳಿದುಬಂದಿದೆ. 
ಇನ್ನು ಆರೋಪಿ ಬಂಧನಕ್ಕೂ ಮುನ್ನ ಮನೆ ಬಳಿ ದೊಡ್ಡ ಹೈಡ್ರಾಮಾ ನಡೆದಿದೆ. ಪತಿ ಮನೆಯಲ್ಲಿ ಇಲ್ಲವೆಂದೂ ಆರೋಪಿ ಪತ್ನಿ ಸುಮಾರು ಮೂರು ಗಂಟೆಗಳ ಕಾಲ ಪೊಲೀಸರನ್ನು ಕಾಯಿಸಿದ್ದಾಳೆ. ಆದರೆ ಪಟ್ಟು ಬಿಡದ ಪೊಲೀಸರು ಅಂತು ಮನೆಯನ್ನು ಜಾಲಾಡಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 
2002ರಲ್ಲಿ ಮುಂಬೈನಲ್ಲಿ ಮೂವರಿಗೆ ಬಿಎಡ್ ಕೋರ್ಸ್ ಗೆ ಪ್ರವೇಶ ಕೊಡಿಸುವುದಾಗಿ ಹೇಳಿ ಅವರಿಂದ ಹಣ ಪಡೆದು ವಂಚಿಸಿದ್ದ. ಈ ಪ್ರಕರಣದಲ್ಲಿ ವಂಚನೆ ಮಾಡಿ ತಪ್ಪಿಸಿಕೊಂಡಿದ್ದ ಆರೋಪಿಯನ್ನು ಪತ್ತೆ ಮಾಡಬೇಕು ಎಂದು ಕೋರ್ಟ್ ಆದೇಶಿಸಿತ್ತು. ಈ ಹಿನ್ನಲೆಯಲ್ಲಿ ಶತ ಪ್ರಯತ್ನ ಮಾಡಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಝಾದ್ ಮೈದಾನ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ವಸಂತ್ ವಖಾರೆ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಶ್ವಸಂಸ್ಥೆ ಸುಧಾರಣೆ ವಿರೋಧಿಸುವವರಿಗೆ ಜಾಗತಿಕ ವೇದಿಕೆ ಬಗ್ಗೆ ಕಾಳಜಿಯಿಲ್ಲ, ಕೇವಲ ಸ್ವಾರ್ಥಕ್ಕೆ ಬಳಕೆ: ಎಸ್. ಜೈಶಂಕರ್ ವಾಗ್ದಾಳಿ

ಸಿಕ್ಕಿಂನಲ್ಲಿ ವರುಣನ ಆರ್ಭಟ: Rimbi ಗ್ರಾಮದಲ್ಲಿ ಭೀಕರ ಭೂಕುಸಿತ; ಹಲವು ಮನೆಗಳು, ಸರ್ಕಾರಿ ವಸತಿ ಗೃಹಗಳು ಧ್ವಂಸ..!

Delhi SIR: ಕ್ಷೇತ್ರ ಪರಿಶೀಲನೆ ಬಳಿಕ ಎಲ್.ಕೆ. ಅಡ್ವಾಣಿ, ಜಗದೀಪ್ ಧನಕರ್, ಜೈಶಂಕರ್ ಸೇರಿ ಹಲವು ಗಣ್ಯರ Voter ID ಗೊಂದಲಕ್ಕೆ ತೆರೆ!

ಮಧ್ಯಪ್ರದೇಶ: ಕಿರಿಯ ವಿದ್ಯಾರ್ಥಿಗೆ ಬೆಲ್ಟ್‌ನಿಂದ ಹೊಡೆತ; ಕೈ ಸುಟ್ಟು ದೌರ್ಜನ್ಯ!

ಸಂಘರ್ಷ ಅಂತ್ಯಕ್ಕೆ ಇರಾನ್ 7 ದಿನಗಳ ಯೋಜನೆ ಪ್ರಸ್ತಾಪ: ಹಾರ್ಮುಜ್ ಜಲಸಂಧಿ ಮತ್ತೆ ಮುಕ್ತ