ದೇಶ

ಎನ್ಎಸ್ಇಎಲ್ ಪ್ರಕರಣ: 177 ಕೋಟಿ ರೂಪಾಯಿ ಮೌಲ್ಯದ ಆಸ್ತಿ ವಶಕ್ಕೆ

Srinivas Rao BV
ಮುಂಬೈ: ಎನ್ಎಸ್ಇಎಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಹೊಸದಾಗಿ 117 ಕೋಟಿ ರೂಪಾಯಿಗಳಷ್ಟು ಆಸ್ತಿಯನ್ನು ಗುರುತಿಸಿ ಜಪ್ತಿ ಮಾಡಿದೆ. 
ಈ ಬಗ್ಗೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿರುವ ಜಾರಿ ನಿರ್ದೇಶನಾಲಯ, ಎನ್ಎಸ್ಇಎಲ್ ಪ್ರಕರಣದಲ್ಲಿ 177.33 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಯನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದೆ.
ಆಸ್ತಿಗಳು ಎನ್ಎಸ್ಇಲ್ ನ ಪ್ರಮುಖ ಸುಸ್ತಿದಾರರಾಗಿರುವ ಪಿಡಿ ಆಗ್ರೋ ಪ್ರೊಸೆಸರ್ಸ್ ಪ್ರೈ.ಲಿ ನ್ನು ನಿರ್ವಹಿಸುತ್ತಿರುವ ಸುರೇಂದ್ರ ಗುಪ್ತ ಅವರ ಅಧೀನದಲ್ಲಿದ್ದು ಒಟ್ಟು 2,890 ಕೋಟಿ ರೂಪಾಯಿ ಆಸ್ತಿ ಇದೆ. ನ್ಯಾಷನಲ್ ಸ್ಪಾಟ್ ಎಕ್ಸ್ ಚೇಂಜ್ ಲಿಮಿಟೆಡ್(ಎನ್ಎಸ್ಇಎಲ್) ನಲ್ಲಿ ನಡೆದಿರುವ ಪ್ರಕರಣದ ತನಿಖೆ ಬಗ್ಗೆ ಮಾಹಿತಿ ನೀಡಿರುವ ಇಡಿ, ಪಿ.ಡಿ ಆಗ್ರೋ ಪ್ರೊಸೆಸರ್ಸ್ ಪ್ರೈ.ಲಿ ಸಂಸ್ಥೆ ಎನ್ಎಸ್ಇಎಲ್ ನಿಂದ ಅಕ್ರಮವಾಗಿ ಫಂಡ್ಸ್ ಪಡೆದಿದೆ ಎಂದು ಹೇಳಿದೆ. ಹೂಡಿಕೆದಾರರನ್ನು ವಂಚಿಸುವ ಕ್ರಿಮಿನಲ್ ಅಪರಾಧ ಇದಾಗಿದ್ದು, ನಕಲಿ ದಾಖಲೆಗಳನ್ನು ಸೃಷ್ಟಿಸಿ ಹೂಡಿಕೆದಾರರ ವಿಶ್ವಾಸಕ್ಕೆ ಧ್ರೋಹ ಬಗೆದಿದೆ ಎಂದು ಹೇಳಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಮ್ಎಸ್ಇಲ್ ವಿರುದ್ಧ ಇಡಿ 20,00 ಪುಟಗಳಷ್ಟು ಚಾರ್ಜ್ ಶೀಟ್ ಸಲ್ಲಿಸಿತ್ತು. 
SCROLL FOR NEXT