ಸಂಗ್ರಹ ಚಿತ್ರ 
ದೇಶ

ಕುಲಭೂಷಣ್ ಜಾದವ್ ಪತ್ನಿಯ ಶೂ ಸಂಶಯಾಸ್ಪದವಾಗಿತ್ತು: ಪಾಕಿಸ್ತಾನ

ಕುಲಭೂಷಣ್ ಜಾದವ್ ಭೇಟಿ ವೇಳೆ ಆತನ ಪತ್ನಿ ಧರಿಸಿದ್ದ ಶೂ ಸಂಶಯಾಸ್ಪದವಾಗಿತ್ತು ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಸ್ಲಾಮಾಬಾದ್: ಕುಲಭೂಷಣ್ ಜಾದವ್ ಭೇಟಿ ವೇಳೆ ಆತನ ಪತ್ನಿ ಧರಿಸಿದ್ದ ಶೂ ಸಂಶಯಾಸ್ಪದವಾಗಿತ್ತು ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತ ಭಾರತದ ಆರೋಪಗಳನ್ನು ಅಲ್ಲಗಳೆದಿರುವ ಪಾಕಿಸ್ತಾನ ವಿದೇಶಾಂಗ ಇಲಾಖೆ, ಕುಲಭೂಷಣ್ ಜಾದವ್ ಧರಿಸಿದ್ದ ಶೂಗಳು ಸಾಮಾನ್ಯ ಅಳತೆಗಿಂತಲೂ ಹೆಚ್ಚಾಗಿತ್ತು. ಹೀಗಾಗಿ ಶಂಕೆಯ ಮೇರೆಗೆ ಶೂಗಳನ್ನು  ತೆಗೆದುಕೊಳ್ಳಲಾಗಿತ್ತು. ಬದಲಿಗೆ ಅವರಿಗೆ ಬೇರೆ ಚಪ್ಪಲಿಗಳನ್ನು ನೀಡಲಾಗಿತ್ತು. ಇನ್ನು ಅವರಿಂದ ಬಿಚ್ಚಿಸಿಕೊಂಡಿದ್ದ ಒಡವೆಗಳನ್ನೂ ಅವರಿಗೆ ವಾಪಸ್ ನೀಡಲಾಗಿದೆ. ಹೀಗಾಗಿ ಭಾರತದ ಆರೋಪದಲ್ಲಿ ಹುರುಳಿಲ್ಲ ಎಂದು ಪಾಕಿಸ್ತಾನ  ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ.
ಸೋಮವಾರವಷ್ಟೇ ಪಾಕಿಸ್ತಾನದಲ್ಲಿರುವ ಕುಲಭೂಷಣ್ ಜಾದವ್ ರನ್ನು ಅವರ ತಾಯಿ ಮತ್ತು ಪತ್ನಿ ಭೇಟಿ ಯಾಗಿದ್ದರು. ಈ ವೇಳೆ ಜಾದವ್ ಪತ್ನಿ ಅವರಿಂದ ಒಡವೆ, ಮಂಗಳಸೂತ್ರವನ್ನು ಪಾಕಿಸ್ತಾನ ಅಧಿಕಾರಿಗಳು ವಶಕ್ಕೆ  ಪಡೆದಿದ್ದರು. ಮತ್ತು ಅವರ ಸಿಂಧೂರವನ್ನು ಅಳಿಸಿ ಹಾಕಿಸಿದ್ದರು ಎಂದು ಭಾರತೀಯ ಮಾಧ್ಯಮಗಳು ವರದಿ ಮಾಡಿದ್ದವು. ಪಾಕಿಸ್ತಾನಿ ಅಧಿಕಾರಿಗಳ ಈ ನಡೆಯನ್ನು ಭಾರತ ತೀವ್ರವಾಗಿ ವಿರೋಧಿಸಿತ್ತು. ಭಾರತೀಯ ಸಂಸ್ಕೃತಿಯನ್ನು ಪಾಕಿಸ್ತಾನಿ ಅಧಿಕಾರಿಗಳು ಅಗೌರವ ನೀಡಿದ್ದಾರೆ ಎಂದು ಆರೋಪಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!