ಉತ್ತರ ಪ್ರದೇಶ 
ದೇಶ

ಟಿವಿ ದಾರಾವಾಹಿ ನೋಡಿ ದೇವಿ ಕಾಳಿಯನ್ನು ಅನುಕರಣೆ ಮಾಡಲು ಹೋದ ಬಾಲಕ ಸಾವು!

ಟಿವಿ ದಾರಾವಾಹಿಗಳು ಮಕ್ಕಳ ಮೇಲೆ ಯಾವ ರೀತಿ ನಕಾರಾತ್ಮಕ ಪರಿಣಾಮ ಬೀರಬಲ್ಲವು ಎಂಬುದಕ್ಕೆ ಇಲ್ಲೊಂದು ಉತ್ತಮ ಉದಾಹರಣೆ ಇದೆ.

ಟಿವಿ ದಾರಾವಾಹಿಗಳು ಮಕ್ಕಳ ಮೇಲೆ ಯಾವ ರೀತಿ ನಕಾರಾತ್ಮಕ ಪರಿಣಾಮ ಬೀರಬಲ್ಲವು ಎಂಬುದಕ್ಕೆ ಇಲ್ಲೊಂದು ಉತ್ತಮ ಉದಾಹರಣೆ ಇದೆ. ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ದಾರಾವಾಹಿಯಲ್ಲಿ ಬರುತ್ತಿದ್ದ ದೇವಿ ಕಾಳಿಯನ್ನು ಅನುಕರಣೆ ಮಾಡಲು ಹೋದ 14 ವರ್ಷದ ಬಾಲಕ ಆಕಸ್ಮಿಕವಾಗಿ ನೇಣು ಹಾಕಿಕೊಂಡಿದ್ದಾನೆ. 
ಮಹಾ ಕಾಳಿ ದಾರಾವಾಹಿಯನ್ನು ವೀಕ್ಷಿಸುತ್ತಿದ್ದ 9 ನೇ ತರಗತಿಯ ಬಾಲಕ ಚಿತ್ರರಂಜನ್ ತನ್ನ ಗುಂಜನ್ ಹಾಗೂ ನೆರೆಮನೆಯವರೊಂದಿಗೆ ಆಟಾವಾಡುತ್ತಿದ್ದ ಬಾಲಕ ತಾನು ಕಾಳಿಯ ಅವತಾರವನ್ನು ತೋರಿಸುತ್ತೇನೆ ಎಂದು ಹೇಳಿದ್ದಾನೆ. ಈ ನಂತರ ದುಪಟ್ಟವನ್ನು ತನ್ನ ಕುತ್ತಿಗೆ ಸುತ್ತ ಸುತ್ತಿಕೊಂಡು ಕುಣಿಗೆ ಬಿಗಿದಿದ್ದಾನೆ ಪರಿಣಾಮ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಘಟನೆ ತಿಳಿಯುತ್ತಿದ್ದಂತೆಯೇ ಪೋಷಕರು ಸ್ಥಳಕ್ಕೆ ಆಗಮಿಸಿದ್ದಾರೆ. ಆದರೆ ಪೋಷಕರು ಆಗಮಿಸುವ ವೇಳೆಗೆ ಆತನ ಪ್ರಾಣ ಪಕ್ಷಿ ಹಾರಿ ಹೋಗಿದೆ. 
ಘಟನೆ ಬಗ್ಗೆ ಚಿತ್ರರಂಜನ್ ಜೊತೆ ಆಟವಾಡುತ್ತಿದ್ದ ಮಕ್ಕಳಿಂದ ಹೇಳಿಕೆ ಪಡೆದಿರುವ ಪೊಲೀಸರಿಗೆ " ಚಿತ್ರರಂಜನ್ ಮಹಾ ಕಾಳಿ ದಾರಾವಾಹಿಯನ್ನು ಅನುಕರಣೆ ಮಾಡುತ್ತಿದ್ದ ಅಲ್ಲಿ ಕಾಳಿಯ ನಾಲಿಗೆ ಹೊರಬವ ರೀತಿಯಲ್ಲೇ ನಾನೂ ಮಾಡುತ್ತೇನೆ ಎಂದು ಹೇಳುತ್ತಿದ್ದ ಎಂದು ಮಕ್ಕಳು ತಿಳಿಸಿದ್ದಾರೆ. 
ಈ ಹಿಂದೆಯೂ ಸಹ ಇದೇ ಮಾದರಿಯಲ್ಲಿ ಯತ್ನಿಸಿದ್ದ ಇದನ್ನು ಗಮನಿಸಿದ್ದ ಚಿತ್ರರಂಜನ್ ತಾಯಿ ದರಾವಾಹಿಯನ್ನು ಅನುಕರಣೆ ಮಾಡದಂತೆ ಎಚ್ಚರಿಸಿದ್ದರು ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT